ಕುಂದಾಪುರ : ಶಿಕ್ಷಣದ ಮೂಲಕ ಹೊಸ ಸಮಾಜದ ನಿರ್ಮಾಣವಾಗಬೇಕಿದೆ.ಬದುಕನ್ನು ಸಮಾಜದ ಒಳಿತಿಗೋಸ್ಕರ ಸಮರ್ಪಣೆ ಮಾಡಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳಿಗೆ ಹತ್ತಿರ ವಾಗಬೇಕಿದೆ. ನನಗಿಂತ, ನನ್ನ ಜಾತಿಗಿಂತ,. ನನ್ನ ಧರ್ಮಗಿಂತ, ನನ್ನ ಬದುಗಿಕಿಂತ ನನ್ನ ದೇಶ ಮೊದಲು ಎನ್ನುವಂತಹ ಸಮಾಜ ನಿರ್ಮಾಣ ವಾಗಬೇಕಿದೆ. `ಶಿಕ್ಷಕರ ಪಾತ್ರ ಮತ್ತಷ್ಟು ಜವಾಬ್ದಾರಿಯುತವಾದುದು. ಉತ್ತಮವಾದ ಆದರ್ಶವಾದ ಸಮಾಜ ನಿರ್ಮಾಣ ಮಾಡುವಂತಹ ಶಿಕ್ಷಕರ ಪಾತ್ರ ಸಮಾಜದಲ್ಲಿ ಮಹತ್ವಪೂರ್ಣವಾದುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜಕ್ಕೆ ಶಿಕ್ಷಕರು ಮಾರ್ಗದರ್ಶಕ ಎನ್ನುವ ಭಾವನೆ ಸಮಾಜದಲ್ಲಿದೆ. ಅಭಿಪ್ರಾಯ ಬೇಧಗಳಿದ್ದರೂ ಪಾರದರ್ಶಕ ವಾಗಿ, ಪ್ರಾಮಾಣಿಕವಾಗಿ ಶ್ರದ್ದೆಯಿಂದ ಶಿಕ್ಷಕರ ವೃತ್ತಿ ಮಾಡುತ್ತಿರುವ ಶಿಕ್ಷಕರಲ್ಲಿ ಉತ್ತಮ ಶಿಕ್ಷಣವನ್ನು ಸಮಾಜಕ್ಕೆ ನೀಡಬೇಕೆಂಬ ಚಿಂತನೆ ಹೊಂದಿದ್ದಾರೆ ಎಂದರು.ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ‘ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಿ.ಜಿ. ಶೆಟ್ಟಿ ಉಪನ್ಯಾಸ ನೀಡಿದರು. ಶೈಕ್ಷಣಿಕ ಸಾಲಿನಲ್ಲಿ ನಿವೃತ್ತಿ ಹೊಂದಿದ ಅಧ್ಯಾಪಕರನ್ನು ಗೌರವಿಸಲಾಯಿತು. ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ, ಕುಂದಾಪುರ ತಾಪಂ ಇಒ ವ ಶಶಿಧರ ಕೆ.ಜಿ. ,ಕುಂದಾಪುರ ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಕುಂದಾಪುರ ಪುರಸಭೆ ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ, ಯುವಜನ ಸೇವಾ ಅಧಿಕಾರಿ ಕುಸುಮಾಕರ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ, ನವೀನಚಂದ್ರ ಶೆಟ್ಟಿ ಅಶೋಕ ನಾಯ್ಕ ಗಣೇಶ ಕುಮಾರ್ ಶೆಟ್ಟಿ ಉದಯ ಕುಮಾರ್ ಶೆಟ್ಟಿ ಕಿರಣ್ ಕುಮಾರ್ ಶೆಟ್ಟಿ ಬಾಲಕೃಷ್ಣ ಶೆಟ್ಟಿ ಉಷಾಲತಾ, ಪ್ರದೀಪ ಭಂಡಾರಿ, ಪ್ರದೀಪ್ ಕುಮಾರ್ ಶೆಟ್ಟಿ ಮೂರ್ತಿ ಎಚ್., ಜಯಶೀಲ ಶೆಟ್ಟಿ ಕಿಶನ್ ರಾಜ್ ಶೆಟ್ಟಿ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಸ್ವಾಗತಿಸಿದರು. ಶಶಿಧರ ಶೆಟ್ಟಿ ಮತ್ತು ಸಂತೋಷ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.