ಕುಂದಾಪುರ : ಒಂಭತ್ತು ದಂಡಿಗೆ ಪಡುಕೇರಿ ಕುಂದಾಪುರ ಇವರ ವತಿಯಿಂದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಯುವ ಮಿತ್ರ ವೃಂದದ ಅಧ್ಯಕ್ಷರಾದ ಶ್ರೀ ಅಮರ್ ಕುಮಾರ್ ಅವರು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಹೇಳಿದರು. ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ನಾಗರಾಜ ಕಾಮಧೇನು, ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ ಕೇಶವ ಮತ್ತು ಇನ್ನಿತರ ಸದಸ್ಯರು, ಯುವ ಮಿತ್ರ ವೃಂದದ ಮಾಜಿ ಅಧ್ಯಕ್ಷರು, ಇತರ ಪದಾಧಿಕಾರಿಗಳು ಮತ್ತು ಪಡುಕೇರಿಯ ಗ್ರಾಮಸ್ತರು ಸೇರಿ ಸುಮಾರು 150 ಜನರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸನ್ಮಾನಿತಗೊಂಡ ಶಿಕ್ಷಕಿಯರಾದ
1. ಶ್ರೀಮತಿ ಪದ್ಮ ಶ್ರೀನಿವಾಸ ಗಾಣಿಗ,
2. ಶ್ರೀಮತಿ ಸಾವಿತ್ರಿ ಸುಬ್ರಾಯ ಗಾಣಿಗ,
3. ಶ್ರೀಮತಿ ವಿಶಾಲಾಕ್ಷಿ ನರಸಿಂಹ ಶೇರೆಗಾರ್,
4. ಶ್ರೀಮತಿ ಗೀತಾ ಪ್ರಭಾಕರ್,
5. ಶ್ರೀಮತಿ ಸುನಂದಾ ಜಗದೀಶ್,
6. ಶ್ರೀಮತಿ ಕೆ. ಪುಷ್ಪಾವತಿ ಪಿ. ರಾವ್.
7. ಆಶಾಲತಾ ಟೀಚರ್
ತಮ್ಮ ಅನುಭವಗಳನ್ನು ಹಂಚಿಕೊಂಡರು.ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಮತ್ತು ಸಮಾಜದ ಏಳಿಗೆಗೆ ಶಿಕ್ಷಕರ ಪಾತ್ರವನ್ನು ವಿವರಿಸಿದ ಅಧ್ಯಕ್ಷರು, ಶಿಕ್ಷಕರ ಜ್ಞಾನ ಭಂಡಾರಕ್ಕೆ ಪ್ರಪಂಚದ ಯಾವುದೆ ತಂತ್ರಜ್ಞಾನ ಸಾಟಿಯಾಗದು ಎಂದರು. ನಿಜ ಅರ್ಥದಲ್ಲಿ ಆಚಾರ್ಯ ದೇವೋ ಭವ ಎಂಬುವುದನ್ನು ಶಿಕ್ಷಕರು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.ಶ್ರೀ ರತ್ನಾಕರ್ ಮಕ್ಕಿಮನೆ ಮತ್ತು ಶ್ರೀ ನವೀನ ಶೇಟ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಶ್ರೀ ಸುನಿಲ್ ಕೆ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದವನ್ನು ಸಮರ್ಪಿಸಿದರು.