ಕೋಟ : ಸಧೃಡ ಸಮಾಜದ ನಿರ್ಮಾಣದ ಶಿಲ್ಪಿಗಳಂತೆ ಶಿಕ್ಷಕರು ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡು, ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸುಸಂಸ್ಕತ ಬದುಕಿಗೆ ಬೇಕಾಗಿರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶ್ರಮಿಸುತ್ತಿರುವ ಶಿಕ್ಷಕರ ಕೆಲಸ ಶ್ಲಾಘನೀಯ ಇಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಬ್ರಹ್ಮಾವರ ವಲಯ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಅವರು ಹೇಳಿದರು.
ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ನಡೆದ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ ಆಶ್ರಯದಲ್ಲಿ ಸಾಹಿತ್ಯ ಸಲ್ಲಾಪ, ಕೃತಿ ಬಿಡುಗಡೆ, ನಾಟಕ ಪ್ರದರ್ಶನ, ಡಾ|| ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಿರ್ದಿಗಂತ(ಸಾಧನೆಯ ಪವಮಾನ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಶಿಕ್ಷಕರು ತಮ್ಮ ಶೈಕ್ಷಣಿಕ ಪಠ್ಯದ ಜೊತೆಯಲ್ಲಿ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ಧಾರೆ ಎರೆದು ಉತ್ತಮ ಅಡಿಪಾಯ ಹಾಕುತ್ತಿರುವ ಶಿಕ್ಷಕರನ್ನು ಗೌರವಿಸುವ ಕೆಲಸ ಸಂತಸದ ವಿಷಯ ಎಂದರು .ಡಾ|| ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರವನ್ನು ಸ.ಹಿ.ಪ್ರಾ.ಶಾಲೆ ಸಾಸ್ತಾವು ಪ್ರಭಾರ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾೈಬ್ರಕಟ್ಟೆ ಶಿಕ್ಷಕ ಸುರೇಂದ್ರ ಕೋಟ, ವಿವೇಕ ಪದವಿ ಪೂರ್ವ ಕಾಲೇಜು ಮತ್ತು ಫ್ರೌಡಶಾಲೆ ದೈಹಿಕ ಶಿಕ್ಷಕ ಗಣೇಶ್ ಶೆಟ್ಟಿ, ಹಿಂದು ಮಾದರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಶಿಕ್ಷಕ ಮಂಜುನಾಥ, ಸ.ಹಿ.ಪ್ರಾ. ಶಾಲೆ ಉಪ್ಪೂರು ಬ್ರಹ್ಮಾವರ ಶಿಕ್ಷಕಿ ಶ್ರೀಮತಿ ಚೆಲುವ ಕುಮಾರಿ, ಸ.ಹಿ.ಪ್ರಾ. ಶಾಲೆ ಹೆಸ್ಕುತ್ತೂರು ಮುಖ್ಯ ಶಿಕ್ಷಕ ಶೇಖರ್, ಸರಕಾರಿ ಫ್ರೌಡಶಾಲೆ ಕುಕ್ಕೆಹಳ್ಳಿ ಶಿಕ್ಷಕಿ ಲಿನೆಟ್ ಮಾರ್ತಾ ಡಿಸೋಜ, ಸ.ಹಿ.ಪ್ರಾಥಮಿಕ ಶಾಲೆ ಬಣ್ಣಂಪಳ್ಳಿ ಶಿಕ್ಷಕಿ ಚಂದ್ರಮತಿ ದೇವಾಡಿಗ, ಸರಕಾರಿ ಫ್ರೌಡಶಾಲೆ ಕಾವಡಿ ಶಿಕ್ಷಕ ಪ್ರಶಾಂತ್ ಜತ್ತನ್, ಸರಕಾರಿ ಸಂಯುಕ್ತ ಫ್ರೌಡಶಾಲೆ(ಪ್ರಾಥಮಿಕ ಭಾಗ)ಮಣೂರು ದೈಹಿಕ ಶಿಕ್ಷಕ ನಾರಾಯಣ ಮೋಗವೀರ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅದ್ವೈತ ಉಪಾಧ್ಯರ “ದೇವತರಂಗಿಣಿ” ಕೃತಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಅನಾವರಣಗೊಳಿಸಿದರು.ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್, ಬ್ರಹ್ಮಾವರ ತಾಲ್ಲೂಕು, ಕ.ಸಾ.ಪ ಅಧ್ಯಕ್ಷ ರಾಮಚಂದ್ರ ಐತಾಳ್, ಸಾಂಸ್ಕøತಿಕ ಚಿಂತಕ ವಿಘ್ನೇಶ್ ಅಡಿಗ, ಶಿಕ್ಷಕ ಶಿವಪ್ರಸಾದ್ ಶೆಟ್ಟಿಗಾರ್, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ, ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ ಅಧ್ಯಕ್ಷೆ ಲೀಲಾವತಿ ಗಂಗಾಧರ, ಕಾರ್ಯದರ್ಶಿ ಸುಲತಾ ಹೆಗ್ಡೆ ಹಾಗೂ ಪಂಚಾಯತ್ ಮತ್ತು ಪ್ರತಿಷ್ಠಾನದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ರವೀಂದ್ರ ರಾವ್ ವಂದಿಸಿದರು.