Home » ಬೀಗ ಮುರಿದು ಒಳನುಗ್ಗಿದ ಕಳ್ಳರು : ವಿಫಲ ಪ್ರಯತ್ನ
 

ಬೀಗ ಮುರಿದು ಒಳನುಗ್ಗಿದ ಕಳ್ಳರು : ವಿಫಲ ಪ್ರಯತ್ನ

by Kundapur Xpress
Spread the love

ಬಜ್ಪೆ: ಪೆರ್ಮುದೆ ಬಂಡಸಾಲೆಯ ಬಳಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೆಲ್ಲ ಜಾಲಾಡಿ ಬರಿಗೈಯಲ್ಲಿ ಮರಳಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.ಶಿಕ್ಷಕಿ ಶೋಭಾ ಬ್ರಿಟೋ ಎಂಬವರ ಮನೆಗೆ ಕಳ್ಳರು ನುಗ್ಗಿದ್ದಾರೆ ಎಂದು ತಿಳಿದು ಬಂದಿದೆ.

ಶಿಕ್ಷಕಿ ಶೋಭಾ ಬ್ರಿಟೋ ಅವರು ತಾಯಿಯ ಮನೆಗೆ ತೆರಳಿದ್ದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಕಳ್ಳರು ರಾತ್ರಿ 10ರಿಂದ 11ರ ವರೆಗೆ ಮನೆಯಲ್ಲಿದ್ದುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಶಿಕ್ಷಕಿ ಸಂಜೆ ಶಾಲೆಯಿಂದ ಮನೆಗೆ ಬಂದಾಗ ಕಳವು ಬಗ್ಗೆ ಮಾಹಿತಿ ತಿಳಿದು ಬಂದಿದೆ. ಮನೆಯೆಲ್ಲ ಜಾಲಾಡಿದ ಕಳ್ಳರಿಗೆ ಯಾವುದೇ ಆಭರಣ ಸಿಗದಿರುವುದು ಹಾಗೂ ಅಲ್ಲಿದ್ದ ಲ್ಯಾಪ್‌ಟಾಪ್‌ನ್ನು ಕಳವು ಮಾಡದೇ ಇರುವುದು ಕಂಡು ಬಂದಿದೆ. ಕಳ್ಳರು ಅ.23ರಂದು ರಾತ್ರಿ ಅಲ್ಲಿಯೇ ಪಕ್ಕದ ಗುಜರಿ ಅಂಗಡಿಯ ಶಟರ್‌ನ್ನು ಮುರಿಯುವ ವಿಫಲ ಪ್ರಯತ್ನ ಮಾಡಿರುವುದು ಕಂಡು ಬಂದಿದೆ.

 

Related Articles

error: Content is protected !!