ಬೈಂದೂರು: ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕಾರ ಹಾಗೂ ಈ ಬಗ್ಗೆ ವದಂತಿಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಜನರ ವಿಶ್ವಾಸ ಪಡೆದು ವಿವಿಧಡೆ ಜನಜಾಗೃತಿ ಮೂಡಿಸುವ ಕಾರ್ಯವನ್ನು ತ್ವರಿತವಾಗಿ ವ್ಯಾಪಕ ರೀತಿಯಲ್ಲಿ ನಡೆಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.
ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ವದಂತಿಯು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗೆಯೇ ವದಂತಿಯಿಂದಲೇ ಅಮಾಯಕರ ಮೇಲೂ ಅನುಮಾನ ಮೂಡುವ ಅವಕಾಶ ಹೆಚ್ಚಿರುತ್ತದೆ. ಇಂತಹ ಪ್ರಕರಣ ಘಟಿಸಿದಾಗ ಇದಕ್ಕೂ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗುತ್ತದೆ. ಆದ್ದರಿಂದ ಪೊಲೀಸ್ ಇಲಾಖೆಯು ಕಳ್ಳತನದ ವದಂತಿ ಬಗ್ಗೆ ಗ್ರಾಮೀಣ ಭಾಗದಲ್ಲಿ ಜನಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ. ಹಾಗೆಯೇ ಕಳ್ಳತನದ ಬಗ್ಗೆ ಯಾವೆಲ್ಲ ರೀತಿಯ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆಯೂ ಜನಸಾಮಾನ್ಯರಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಜತೆ ಸೇರಿ ಅರಿವಯ ಮೂಡಿಸುವ ಕಾರ್ಯವು ಆಗಬೇಕು. ವದಂತಿಗಳು ಹಬ್ಬದಂತೆ ತುರ್ತಾಗಿ ಎಚ್ಚರ ವಹಿಸಬೇಕು ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ವಾರ ಸಭೆ
ಇದೇ ವಿಚಾರವಾಗಿ ಮುಂದಿನ ವಾರದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಲಾಗುವುದು. ಅಗತ್ಯಬಿದ್ದರೆ ಸಾರ್ವಜನಿಕರೊಂದಿಗೂ ಸಭೆ ನಡೆಸಲಿದ್ದೇವೆ ಎಂದು ಶಾಸಕರು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ತಕ್ಷಣವೇ ಹೀಗೆ ಮಾಡಿದರೆ ಕಳ್ಳತನ ಹಾಗೂ ಕಳ್ಳತನದ ಬಗ್ಗೆ ವದಂತಿ ತಡೆಯಲು ಸಾಧ್ಯವಿದೆ
ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆ ಸಭೆ ನಡೆಸಿ ಸ್ಥಳೀಯರಿಂದ ಮಾಹಿತಿ, ಸಲಹೆ ಪಡೆಯುವುದು, ಅವರಿಗೆ ಸೂಕ್ತ ಅರಿವು ಜಾಗೃತಿ ಮೂಡಿಸುವ ಕಾರ್ಯ ಆಗಬೇಕು.
* ಕ್ಷೇತ್ರ ವ್ಯಾಪ್ತಿ ಗ್ರಾಮೀಣ ಭಾಗ ಹೆಚ್ಚಿರುವುದರಿಂದ ಹೆದ್ದಾರಿ ಮಾತ್ರವಲ್ಲದೇ ಒಳ ರಸ್ತೆಗಳಲ್ಲೂ ಪೊಲೀಸ್ ಗಸ್ತು ಹೆಚ್ಚಿಸಬೇಕು.
* ಇಲಾಖೆ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಕ್ಷೇತ್ರದ ಪ್ರಮುಖ ಆಯಾ ಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಾ ತ್ವರಿತವಾಗಿ ಅಳವಡಿಸಬೇಕು.