ಕುಂದಾಪುರ : ಮುರ್ಡೇಶ್ವರಕ್ಕೆ ವಿಸ್ತರಣೆಗೊಂಡಿರುವ ತಿರುಪತಿ ರೈಲಿಗೆ ಶನಿವಾರ ಸಂಜೆ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ, ತೆಕ್ಕಟ್ಟಿರೋಟರಿ ಕ್ಲಬ್, ಲಯನ್ಸ್ ಕ್ಲಬ್ ಅಮೃತಧಾರಾ, ನಾನಾ ದೇವಸ್ಥಾನಗಳ ಪ್ರಮುಖರು ಹಾಗೂ ಸಂಸ್ಥೆಗಳ ನೇತೃತ್ವದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಸಂಜೆ 4.40 ಗಂಟೆಗೆ ತಲುಪಿದ ರೈಲಿಗೆ ತ್ರಿವಿಕ್ರಮ ಪೈ, ಗಣಪತಿ ಟಿ.ಶ್ರೇಯಾನ್, ನಾಗರಾಜ್ ಆಚಾರ್ ನೇರಂಬಳ್ಳಿ ಬೃಹತ್ ಹೂಮಾಲೆ ಹಾಕಿ ತಿರುಪತಿ ತಿಮ್ಮಪ್ಪನಿಗೆ ಜೈಕಾರ ಕೂಗಿದರು.ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತಸರ ಬಿ.ಅಪ್ಪಣ್ಣ ಹೆಗ್ಡೆ, ಆನೆಗುಡ್ಡೆ ದೇವಳದ ಧರ್ಮದರ್ಶಿಗಳಾದ ಕೆ ಶ್ರೀರಮಣ ಉಪಾಧ್ಯಾಯ, ಪೇಟೆ ವೆಂಕಟರಮಣ ದೇವಳದ ಮೊತ್ತೇಸರ ರಾಧಾಕೃಷ್ಣ ಶಣೈ ಶಾಸಕ ಕಿರಣ್ ಕುಮಾರ ಕೊಡ್ಗಿ ಪುಷ್ಪಾರ್ಚನೆಗೈದು ಸ್ವಾಗತಿಸಿದರು.
ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಸಂಚಾಲಕ ವಿವೇಕ್ ನಾಯಕ್, ಸಮಿತಿಯ ಪ್ರಮುಖರಾದ ಸುಧಾಕರ ಶೆಟ್ಟಿ ಗೌತಮ್ ಶೆಟ್ಟಿ ಪದ್ಮನಾಭ ಶೆಣೈ, ಪ್ರವೀಣ್ ಕುಮಾರ್, ಜೋಯ್ ಜೆ. ಕರ್ವಾಲೊ, ರಾಘವೇಂದ್ರ ಶೇಟ್, ರಾಘವೇಂದ್ರ ಭಂಡಾರ್‌ಕರ್, ಕೋಟೇಶ್ವರ ದೇವಳದ ಮಾಜಿ ಧರ್ಮದರ್ಶಿ ಸುರೇಶ್ ಬೆಟ್ಟಿನ್, ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ. ಶ್ರೇಯಾನ್, ಕಾರ್ಯದರ್ಶಿ ಕೃಷ್ಣಕಾಂಚನ್, ಲಯನ್ಸ್ ಕ್ಲಬ್ ಅಮೃತಧಾರಾ ಸದಸ್ಯರಾದ ಸರಸ್ವತಿ ಪುತ್ರನ್, ಕಲ್ಪನಾ ಭಾಸ್ಕರ್, ಸುಮ ನಾಗರಾಜ್ ಆಚಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಬಿಜೆಪಿ ಯುವ ಮೋರ್ಚಾ ಮುಖಂಡ ಪೃಥ್ವಿರಾಜ್ ಶೆಟ್ಟಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ ಮುಂತಾದವರು ಉಪಸ್ಥಿತರಿದ್ದರು