ಕುಂದಾಪುರ : ಮುಂಬಯಿನ ಲೋಕಮಾನ್ಯ ತಿಲಕ್ (ಕುರ್ಲಾ) ರೈಲಿಗೆ ಕುಂದಾಪುರದಲ್ಲಿಯೂ ನಿಲುಗಡೆ ನೀಡಲಾಗಿದ್ದು, ಈ ರೈಲು ಗುರುವಾರ ಮೂಡಕಟ್ಟೆಯಲ್ಲಿರುವ ನಿಲ್ದಾಣಕ್ಕೆ ಆಗಮಿಸಿದ ವೇಳೆ ಕುಂದಾಪುರ ಬಿಜೆಪಿ ಮಂಡಲದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಶಾಸಕ ಕಿರಣ್ ಕುಮಾರ್ ಕೊಡ್ಡಿ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಯತ್ನದಿಂದಾಗಿ ಈ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ ಸಿಗುವಂತಾಗಿದೆ. ಮುಂದಿನ ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ನಿಲ್ದಾಣದ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಪ್ರ. ಕಾಯದರ್ಶಿ ಸತೀಶ್ ಪೂಜಾರಿ, ಸುಧೀರ್‌ಕೆ.ಎಸ್., ಯುವಮೋರ್ಚಾಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಮಹಿಳಾ ಮೋರ್ಚಾದ ರೂಪಾ ಪೈ, ಶ್ವೇತಾ, ಪಕ್ಷದ ಮುಖಂಡರಾದ ಸುನಿಲ್ ಶೆಟ್ಟಿಹೇರಿಕುದ್ರು ಅವಿನಾಶ್ ಉಳ್ಳೂರು, ಶ್ರೀನಿಧಿ ಹತ್ವಾರ್, ಮಹೇಶ್ ಶೆಣೈ, ಪುರಸಭೆ ಸದಸ್ಯರಾದ ಪ್ರಭಾಕರ ವಿ., ಸಂತೋಷ್ ಶೆಟ್ಟಿ ಮಾಜಿ ಸದಸ್ಯೆ ಪುಷ್ಪಾ ಶೇಟ್, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕಾವ್ಯದರ್ಶಿ ಪ್ರವೀಣ್ ಕುಮಾರ್, ಕೋಶಾಧಿಕಾರಿ ಉದಯ ಭಂಡಾರ್‌ಕರ್, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಪದ್ಮನಾಭ ಶೆಣೈ, ಸಂಚಾಲಕ ವಿವೇಕ್ ನಾಯಕ್, ಸದಸ್ಯರಾದ ರಾಘವೇಂದ್ರ ಶೇಟ್, ಸುಧಾಕರ ಶೆಟ್ಟಿ ಹುಂತ್ರಿಕೆ, ದಯಾ ಸಾಲಿನ್ಸ್ ಶ್ರೀಧರ್ ಸುವರ್ಣ, ಭಾಸ್ಕರ ಪೂಜಾರಿ ಇದ್ದರು.