ಬೆಂಗಳೂರು : ರಾಜ್ಯ ಬಿಜೆಪಿಯಿಂದ ಹಮ್ಮಿಕೊಂಡಿರುವ ರಾಮಮಂದಿರ ದರ್ಶನ ಅಭಿಯಾನದ ಅಂಗವಾಗಿ ಈ ತಿಂಗಳ 31ರಂದು ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಮೊದಲ ರೈಲು ಅಯೋಧ್ಯೆಗೆ ಪ್ರಯಾಣಿಸಲಿದೆ. ಸುಮಾರು 1500 ಮಂದಿ ತೆರಳುವ ಈ ರೈಲನ್ನು ಬುಧವಾರ ಸಂಜೆಯಷ್ಟೇ ನಿಗದಿತ ಮೊತ್ತ ಪಾವತಿಸಿ ಬುಕ್ ಮಾಡಲಾಗಿದೆ ಎಂದು ಅಭಿಯಾನದ ಸಹ ಸಂಚಾಲಕ ಜಗದೀಶ್ ಹಿರೇಮನಿ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಅಯೋಧ್ಯೆಯ ರಾಮ ಮಂದಿರ ದರ್ಶನ ಮಾಡಿಸುವ ಸಲುವಾಗಿ ರಾಜ್ಯ ಬಿಜೆಪಿಯು ಈ ಅಭಿಯಾನ ಆರಂಭಿಸಿದ್ದು ಇದರಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದಾಗಿದೆ. ಇದರ ಅಂಗವಾಗಿ ರಾಜ್ಯದಿಂದ ಹೆಚ್ಚ ಕಡಿಮೆ 35 ಸಾವಿರ ಮಂದಿ ಕಾರ್ಯಕರ್ತರು ಜ.31 ರಿಂದ ಮಾ.25ರವರೆಗೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 25 ರೈಲುಗಳಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಒಟ್ಟು 6 ದಿನಗಳ ಪ್ರವಾಸ ಇದಾಗಿದ್ದು, ಪ್ರತಿಯೊಬ್ಬರಿಗೆ ಊಟ, ವಸತಿ ಸಹಿತ ಮೂರು ಸಾವಿರ ರೂಪಾಯಿ ವಚ್ಚವಾಗಲಿದೆ. ಅದನ್ನು ಕಾರ್ಯಕರ್ತರೇ ಭರಿಸಬೇಕು ಎಂದು ಸೂಚಿಸಲಾಗಿದೆ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಹೊಣೆ ಮಾತ್ರ ಪಕ್ಷದ್ದಾಗಿದೆ ಆ ಪ್ರಕಾರ ಮೊದಲ ರೈಲು ಈ ತಿಂಗಳ 31 ರಂದು ಬೆಂಗಳೂರಿಂದ ಅಯೋಧ್ಯೆಗೆ ತೆರಳಲಿದೆ