ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಬೀಚ್ ಪೆಂಗಲ್ ಚಂಡಮಾರುತ ಎಫೆಕ್ಟ್ ನಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ,
ವಿಶ್ವ ಪ್ರಸಿದ್ಧ ತ್ರಾಸಿ ಬೀಚ್ ದೇಶ ವಿದೇಶಗಳಿಂದ, ಹಾಗೂ ರಾಜ್ಯ ಹೊರ ರಾಜ್ಯಗಳಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ದಿನನಿತ್ಯ ತ್ರಾಸಿ ಬೀಚಿನ ಸೌಂದರ್ಯ ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಎಂಜಾಯ್ ಮಾಡುತ್ತಿದ್ದಂತ ಪ್ರವಾಸಿ ತಾಣ ಇಂದು ಪೆಂಗಲ್ ಚಂಡಮಾರುತ ಎಫೆಕ್ಟ್ ನಿಂದ ತ್ರಾಸಿ ಬೀಚ್ ಬಿಕೋ ಎನ್ನುತ್ತಿದೆ
ತ್ರಾಸಿ ಬೀಚಿನಲ್ಲಿ ಪ್ರವಾಸಿಗರ ಮೋಜು ಮಸ್ತಿಗಾಗಿ ವಾಟರ್ ಸ್ಪೋರ್ಟ್ಸ್, ವಿಶಾಲವಾದ ಪಾರ್ಕಿಂಗ್ ಸೈ ಡೈನಿಂಗ್ (ಗಗನದಲ್ಲಿ ಊಟ) ಆರಂಭಗೊಂಡಿದೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿ ತಾಣ ಇಂದು ಮಾತ್ರ ಪೆಂಗಲ್ ಚಂಡಮಾರುತ ಎಫೆಕ್ಟ್ ನಿಂದ ತ್ರಾಸಿ ಬೀಚ್ ಬಿಕೋ ಎನ್ನುತ್ತಿದೆ.