ಕಟಪಾಡಿ : ತುಳುನಾಡಿನ ಪಂಚ ವರ್ಣದ ಮಣ್ಣಿನ ಮಕ್ಕಳು ನಾವೆಲ್ಲರೂ. ನಮ್ಮ ಸಂಸ್ಕೃತಿ ಆಚಾರ ವಿಚಾರ ಜೊತೆಗೆ ನಮ್ಮ ಭಾಷೆಯನ್ನು ಕೂಡ ಕಲಿಯುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 5 ರಂದು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ “ಬಲೆ ತುಲು ಲಿಪಿ ಕಲ್ಪುಗ” ಅನ್ನುವ ತುಳು ಭಾಷಾ ತರಬೇತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ತರಗತಿಗೆ ಚಾಲನೆಯನ್ನು ನೀಡಲಾಯಿತು.
ಉದ್ಘಾಟನೆ ನೆರವೇರಿಸಿದ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ನಾರಾಯಣ್ ರಾವ್ ರವರು ಇಂದು ಭಾಷೆಯನ್ನು ಕಲಿಯಲು ಹಲವಾರು ಆಧುನಿಕ ತಂತ್ರಜ್ಞಾನಗಳಿವೆ ಆದರೆ ನಿಜವಾಗಿಯೂ ಭಾಷೆ ಕಲಿಯುವುದೆಂದರೆ ಸಂಸ್ಕೃತಿ, ಭಾಷೆಯ ಇತಿಹಾಸ, ಪರಂಪರೆಯನ್ನು ಕೂಡ ಕಲಿಯುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರವಿಕುಮಾರ್ ಕಡೆಕಾರ್ ,ನಾಟಕ ರಚನೆಕಾರ ನಟ ನಿರ್ದೇಶಕ, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾವು ಎಲ್ಲಾ ಭಾಷೆಗಳನ್ನು ಕಲಿಯಬೇಕು ಜೊತೆಗೆ ಗೌರವಿಸಬೇಕು. ಆದರೆ ನಮಗೆ ಜನ್ಮ ಕೊಟ್ಟಂತಹ ಈ ತುಳುನಾಡಿನ ಭಾಷೆಯ ಅಭಿಮಾನವನ್ನು ಬೆಳೆಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಾವೆಲ್ಲರೂ ಸೇರಿ ನಮ್ಮ ತಾಯಿನಾಡಿನ ಭಾಷೆಯನ್ನು ಉಳಿಸಿಕೊಳ್ಳೋಣ ಆಗ ಮಾತ್ರ ತುಳು ಭಾಷೆ ರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಹಾಗೂ ಜೈ ತುಳುನಾಡು ಸಂಘದ ಅಧ್ಯಕ್ಷರಾದ ಶ್ರೀ ಉದಯ ಪುಂಜರವರು ವಿದ್ಯಾರ್ಥಿಗಳಾದ ನೀವು ಈಗಿನಿಂದಲೇ ತುಳು ಭಾಷೆ ಲಿಪಿಯನ್ನು ಕಲಿತರೆ ಅದನ್ನು ಮುಂದಿನ ಜನಾಂಗಕ್ಕೂ ಕಲಿಸಬಹುದು ಆಗ ಮಾತ್ರ ಎಲ್ಲರಿಗೂ ತುಳು ಭಾಷೆ, ತುಳು ಲಿಪಿಯ ಅರಿವು ಮೂಡಲು ಸಾಧ್ಯವಾಗುವುದರೊಂದಿಗೆ ನಮ್ಮ ಭಾಷೆಯನ್ನು ಕಲಿತ ಹೆಮ್ಮೆಯೂ ನಮಗೆ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ವಿಫ್ನೇಶ್ ಶೆಣೈ ರವರು ವಹಿಸಿದ್ದರು . ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ವಾಗೀಶ್ ಅವರು ಸ್ವಾಗತಿಸಿ, ಶ್ವೇತಾ ರವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೈ ತುಳುನಾಡು ಸಂಘದ ತುಳು ಲಿಪಿ ಬೋಧಕರಾದ ಸಂತೋಷ್ ಎನ್ ಎಸ್ ಹಾಗೂ ಸುಶೀಲ ಜಯಕರ್ ಕೊಡವೂರ್, ಸ್ಥಾಪಕ ಸದಸ್ಯರಾದ ಶರತ್ ಕೊಡವೂರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಾಗರ್ ಬನ್ನಂಜೆ,ವಿಶಾಂತ್ ಉದ್ಯಾವರ,ಸದಸ್ಯರಾದ ಅಕ್ಷತಾ ಕುಲಾಲ್, ಸುಪ್ರಿಯಾ ಕೊಡವೂರ್,ದೀಪಕ್ ಉದ್ಯಾವರ ,ಸಂತೋಷ್ ನಿಟ್ಟೆ ಹಾಗೂ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರಾದ ರಾಮದಾಸ್ ನಾಯಕ್ ಮತ್ತು ಶಿಕ್ಷಕ ವೃಂದದವರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.