ಉಡುಪಿ : ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಸಪ್ಟೆಂಬರ್ 2024ರಲ್ಲಿ ನಡೆಸಿದ ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಕೆ ಸ್ವಾತಿ ನಾಯಕ್ ಅವರು ಗ್ರೂಪ್ ಒಂದರ ವಿಷಯಗಳಾದ Adv. Accounting 61 ಅಂಕ , Corporate Law 68 ಅಂಕ, Taxation 79 ಅಂಕ, ಮತ್ತು ಗ್ರೂಪ್ ಎರಡರ ವಿಷಯಗಳಾದ Costing 69 ಅಂಕ , Audit 66 ಅಂಕ, FM&SM 57 ಅಂಕ ಒಟ್ಟು 400 ಅಂಕಗಳನ್ನು ಗಳಿಸಿ ಆಲ್ ಇಂಡಿಯಾ 19ನೇ ರ್ಯಾಂಕ್ ನ್ನು ಪಡೆದುಕೊಂಡಿದ್ದಾರೆ.
ಇವರು ಬ್ರಹ್ಮಾವರ ತಾಲೂಕಿನ ಕೆ ಸುರೇಶ್ ನಾಯಕ್ ಹಾಗೂ ಕೆ ಸುರೇಖ ನಾಯಕ್ ದಂಪತಿಗಳ ಪುತ್ರಿಯಾಗಿದ್ದು, ತಮ್ಮ ಸಿಎ ಇಂಟರ್ಮಿಡಿಯೇಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದಿದ್ದಾರೆ.