Home » ತ್ರಿಶಾ ಕ್ಲಾಸಸ್ : ಸಿಎಸ್ ಎಕ್ಸಿಕ್ಯೂಟಿವ್ ಸಾಧಕರಿಗೆ ಸನ್ಮಾನ
 

ತ್ರಿಶಾ ಕ್ಲಾಸಸ್ : ಸಿಎಸ್ ಎಕ್ಸಿಕ್ಯೂಟಿವ್ ಸಾಧಕರಿಗೆ ಸನ್ಮಾನ

by Kundapur Xpress
Spread the love

ಕಟಪಾಡಿ : ಸಿ ಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳಿಗೆ ತ್ರಿಶಾ ಕ್ಲಾಸಸ್ ವತಿಯಿಂದ ಸನ್ಮಾನ ಕಾರ್ಯಕ್ರಮವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ತ್ರಿಶಾ ಸಂಸ್ಥೆಯ ಅನುಭವಿ ಬೋಧಕರಾದ ಪ್ರೊಫೆಸರ್ ರಾಜ್ ಗಣೇಶ್ ಕಾಮತ್ ರವರು ಮಾತನಾಡಿ ಜೀವನದಲ್ಲಿ ಸಮರ್ಪಕ ಯೋಜನ ಕ್ರಮ, ಆತ್ಮವಿಶ್ವಾಸ, ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿ ಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಟ್ರಸ್ಟಿಗಳಾದ ನಮಿತ ಜಿ ಭಟ್ ಮತ್ತು ರಾಮ್ ಪ್ರಭು ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರು ವಿಘ್ನೇಶ್ ಶೆಣೈ, ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರು ನಾರಾಯಣ ರಾವ್ ,ತ್ರಿಶಾ ಸಂಸ್ಥೆಯ ಅಕಾಡೆಮಿಕ್ ಮ್ಯಾನೇಜರ್ ವರದರಾಜ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ  ನಿರೂಪಿಸಿದರು.

 

Related Articles

error: Content is protected !!