Home » ತ್ರಿಶಾ ಸಂಸ್ಥೆ ಮಂಗಳೂರು : ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಹಕಾರಿ
 

ತ್ರಿಶಾ ಸಂಸ್ಥೆ ಮಂಗಳೂರು : ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಹಕಾರಿ

by Kundapur Xpress
Spread the love

ಮಂಗಳೂರು : ಮಂಗಳೂರಿನ ಕೊಟ್ಟಾರದಲ್ಲಿರುವ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೆಜ್ಮೆಂಟ್‌ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಪದವಿಯ ನಂತರದ ಅವಕಾಶಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಿತು. “ಮುಂದೇನು?” ಎಂಬ ಪ್ರಶ್ನೆಗೆ ಉತ್ತರ ನೀಡುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಸ್ಪಷ್ಟತೆ ನೀಡಲಾಯಿತು.

ಸಾಫ್ಟ್ ಸ್ಕಿಲ್ ಟ್ರೇನರ್ ಹಾಗೂ ಪ್ರವೇಶಾತಿ ಸಲಹಗಾರರಾದ ಚಂದನ್ ರಾವ್ ಮಾರ್ಗದರ್ಶನ ನೀಡಿದ್ದು, ಆತ್ಮವಿಶ್ವಾಸ ಬೆಳೆಸಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಭಯ ನಿವಾರಣೆಗೆ ಸಹಾಯ ಮಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿಗೆ ತಯಾರಾಗುವುದು ಅತ್ಯವಶ್ಯಕ.

ಈ ಹಿನ್ನೆಲೆದಲ್ಲಿ “Campus to Corporate” ಎಂಬ 3 ದಿನಗಳ ಶಿಬಿರ ಮಂಗಳೂರು ಮತ್ತು ಉಡುಪಿಯಲ್ಲಿ  ದಿನಾಂಕ 3ರಿಂದ 5ರವರೆಗೆ ನಡೆಯುತ್ತಿದೆ. ಇದು PGCET, ಬ್ಯಾಂಕಿಂಗ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರೂಪುಗೊಂಡಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಲಿದೆ  ಎಂದು ತಿಳಿಸಿದರು

 

Related Articles

error: Content is protected !!