ಕಟಪಾಡಿ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟ ಇದೇ ಸೆಪ್ಟೆಂಬರ್ 4 ರಂದು ಕಟಪಾಡಿಯ ಎಸ್.ವಿ. ಎಸ್. ಪದವಿ ಪೂರ್ವ, ಕಾಲೇಜಿನಲ್ಲಿ ನಡೆಯಿತು. ಪಂದ್ಯಾಟವನ್ನು ಉದ್ಘಾಟಿಸಿದ ತ್ರಿಶಾ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸಿ.ಎ.ಗೋಪಾಲಕೃಷ್ಣ ಭಟ್ ಅವರು ಇಂತಹ ಕ್ರೀಡಾಕೂಟ ವಿದ್ಯಾರ್ಥಿಗಳಿಗೆ ದೈಹಿಕ ಸಾಮರ್ಥ್ಯ ಹೆಚ್ಚಿಸುದಲ್ಲದೇ ಮಾನಸಿಕವಾಗಿ ಸಧೃಢರಾಗಿಸುತ್ತದೆ, ಜಯಗಳಿಸಿದ ತಂಡಗಳು ಜಿಲ್ಲೆ, ರಾಜ್ಯಮಟ್ಟದಲ್ಲಿ ಪ್ರತಿನಿಧಿಸಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್.ವಿ. ಎಸ್.ವಿದ್ಯಾವರ್ಧಕ ಸಂಘದ ಆಡಳಿತ ಅಧಿಕಾರಿ ಶ್ರೀ ಸುಧಾಕರ್ ಬ್ರಹ್ಮಾವರ, ದೈಹಿಕ ಶಿಕ್ಷಕ ಶ್ರೀ ಶಶಿಕಿರಣ್ ಉಪಸ್ಥಿತರಿದ್ದರು. ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರಿಪ್ರಸಾದ್ ಸ್ವಾಗತಿಸಿ ಎಸ್.ವಿ. ಎಸ್. ಪದವಿ ಪೂರ್ವ, ಕಾಲೇಜಿನ ಪ್ರಾಂಶುಪಾಲರಾದ ಡಾ.ದಯಾನಂದ ಪೈ ವಂದಿಸಿದರು. ಉಪನ್ಯಾಸಕರಾದ ಶ್ರೀ ಧೀರಜ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.
ಬಾಲಕರ ವಿಭಾಗದಲ್ಲಿ ಹಿಂದೂ ಪ.ಪೂ. ಕಾಲೇಜು, ಶಿರ್ವ ಪ್ರಥಮ ಹಾಗೂ ಸೈಂಟ್ ಮೇರಿಸ್ ಪ.ಪೂ. ಕಾಲೇಜು, ಶಿರ್ವ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಸೈಂಟ್ ಜೋಸ್ಸ್ ಪ.ಪೂ. ಕಾಲೇಜು, ಶಂಕರಪುರ ಪ್ರಥಮ ಹಾಗೂ ಹಿಂದೂ ಪ.ಪೂ. ಕಾಲೇಜು, ಶಿರ್ವ ದ್ವಿತೀಯ ಸ್ಥಾನಗಳನ್ನು ಗಳಿಸಿದೆ.

