Home » ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ
 

ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ

by Kundapur Xpress
Spread the love

ಉಡುಪಿ  : ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರುಗಳು ಮತ್ತು ಸಹ ಸಂಚಾಲಕರುಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರುಗಳಾದ ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ವಿಜಯ ಕೊಡವೂರು ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ಸುದೀಪ್ ಶೆಟ್ಟಿ ನಿಟ್ಟೆ, ಸಹ ಸಂಚಾಲಕರಾಗಿ ಅಜಿತ್ ಜೋಗಿ ಯಡ್ತಾಡಿ, ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಸಂಚಾಲಕರಾಗಿ ಗೋಪಾಲ್ ಕೋಟ್ಯಾನ್ ತೆಂಕನಿಡಿಯೂರು, ಸಹ ಸಂಚಾಲಕರಾಗಿ ಕೃಷ್ಣ ಕುಲಾಲ್ ವರ್ವಾಡಿ, ನೇಕಾರರ ಪ್ರಕೋಷ್ಠದ ಸಂಚಾಲಕರಾಗಿ ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ, ಸಹ ಸಂಚಾಲಕರಾಗಿ ರಾಜಕೇಸರಿ ಶೆಟ್ಟಿಗಾರ್, ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕರಾಗಿ ಅಶೋಕ್ ರಾವ್ ಕಟಪಾಡಿ, ಸಹ ಸಂಚಾಲಕರಾಗಿ ರಂಜಿತಾ ಶೆಟ್ಟಿ ಕೆಮ್ತೂರು, ಕೈಗಾರಿಕಾ ಪ್ರಕೋಷ್ಠದ ಸಂಚಾಲಕರಾಗಿ ಸದಾನಂದ ಪ್ರಭು ಪೆರ್ಣoಕಿಲ, ಸಹ ಸಂಚಾಲಕರಾಗಿ ರವಿ ಆರ್. ಆಚಾರ್ಯ, ಆರ್ಥಿಕ ಪ್ರಕೋಷ್ಠದ ಸಂಚಾಲಕರಾಗಿ ರಾಜ ಎಮ್. ಸಾಲ್ಯಾನ್, ಸಹ ಸಂಚಾಲಕರಾಗಿ ಸುಧೀರ್ ಭಟ್ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!