Home » ವಡ್ಡರ್ಸೆ ಸರಕಾರಿ ಪ್ರೌಢ ಶಾಲೆಗೆ ಕ್ರೀಡೋಪಕರಣ ಹಸ್ತಾಂತರ
 

ವಡ್ಡರ್ಸೆ ಸರಕಾರಿ ಪ್ರೌಢ ಶಾಲೆಗೆ ಕ್ರೀಡೋಪಕರಣ ಹಸ್ತಾಂತರ

by Kundapur Xpress
Spread the love

ಕೋಟ : ಮಕ್ಕಳ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡಾ ಚಟುವಟಿಕೆ ಸ್ಫೂರ್ತಿದಾಯಕ. ಹೊರಾಂಗಣ ಹಾಗೂ ಒಳಾಂಗಣ ಕ್ರೀಡೆಗಳು ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸಿ ಕಲಿಕೆಯ ಪ್ರಗತಿಗೆ ಮುನ್ನೋಟ ಆಗುವುದು ಎಂದು ಕೆನರಾ ಬ್ಯಾಂಕ್ ವಡ್ಡರ್ಸೆ ಶಾಖೆಯಿಂದ ಉಚಿತವಾಗಿ ವಡ್ಡರ್ಸೆ ಸರಕಾರಿ ಪ್ರೌಢ ಶಾಲಾ ಮಕ್ಕಳಿಗೆ ಕ್ರೀಡೋಪಕರಣ ವಿತರಿಸಿ ಬ್ಯಾಂಕ್‌ನ ಪ್ರಬಂಧಕ ರಾಬಿನ್.ಆರ್ ಸಂತಸ ವ್ಯಕ್ತಪಡಿಸಿದರು.
ಬ್ಯಾಂಕ್‌ಗಳು ಶಾಲಾ ಶೈಕ್ಷಣಿಕ ಚಟುವಟಿಕೆ ಚುರುಕುಗೊಳಿಸಲು ಕೆಲವೊಂದು ಯೋಜಿತ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ಯೋಜನೆ ರೂಪಿಸಿದೆ ಎಂದು ಕೆನರಾ ಬ್ಯಾಂಕ್ ಅಧಿಕಾರಿ ಸಿ.ಬಿ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಭೋಜ ಹೆಗ್ಡೆ ಮಾತನಾಡಿ ಶೈಕ್ಷಣಿಕ ಪ್ರಗತಿಯಲ್ಲಿ ಯಶಸ್ಸಿನ ನಡೆಯಲ್ಲಿರುವ ಪ್ರೌಢ ಶಾಲೆಯು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಸಾಧಿಸುವಲ್ಲಿ ಕ್ರೀಡೋಪಕರಣ ಹೆಚ್ಚಿದ್ದಾಗ ನೆರವಾಗುತ್ತದೆ ಎಂದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಉಷಾ ಕಾರ್ಯಕ್ರಮದ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದಭದಲ್ಲಿ ಯೋಗ ತರಬೇತುದಾರ ನಾಗೇಂದ್ರ ಇವರನ್ನು ಸಂಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತವನೆಯನ್ನು ಮುಖ್ಯ ಶಿಕ್ಷಕಿ ಗಾಯತ್ರಿ ದೇವಿ ಗೈದರು. ಶಿಕ್ಷಕರಾದ ಸಧಾಕರ, ಭಾರತಿ, ಶರತ್, ಗೀತಾ ಉಪಸ್ಥಿತರಿದ್ದರು. ಶಿಕ್ಷಕರಾದ ಹೆರಿಯ ವಂದಿಸಿದರು. ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

   

Related Articles

error: Content is protected !!