ವಾರಣಾಸಿ : ಕಾಶಿ ವಿಶ್ವನಾಥ ಮಂದಿರದ ಜ್ಞಾನವಾಪಿ ಮಸೀದಿಯ ತಳಮಹಡಿಯಲ್ಲಿರುವ ಶೃಂಗಾರಗೌರಿ ದೇಗುಲದಲ್ಲಿ ಪೂಜೆಗೆ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದ ಎಂಟೇ ತಾಸಿನಲ್ಲಿ ಅಂದರೆ ಬುಧವಾರ ಮಧ್ಯರಾತ್ರಿಯಿಂದಲೇ ಪೂಜೆ ಆರಂಭಿಸಲಾಗಿದೆ. ಇದರಿಂದಾಗಿ 31 ವರ್ಷ ನಂತರ ಪೂಜೆ ಆರಂಭವಾದಂತಾಗಿದೆ.
ಪೂಜೆಯ ವೇಳೆ, ಕಾಶಿ ವಿಶ್ವನಾಥ ಮಂದಿರದ 5 ಅರ್ಚಕರು ಹಾಗೂ ಪೂಜೆಗೆ ಅನುಮತಿ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವ್ಯಾಸ್-ಪಾಠಕ್ ಕುಟುಂಬದ ಸದಸ್ಯರು ಹಾಜರಿದ್ದರು. ಮುಂಜಾಗ್ರತಾ ಕ್ರಮವಾಗಿ ವಿಶ್ವನಾಥ ಮಂದಿರ ಹಾಗೂ ಜ್ಞಾನವಾಪಿ ಮಸೀದಿ ಸುತ್ತ ಭಾರಿ ಭದ್ರತೆ ಹಮ್ಮಿಕೊಳ್ಳಲಾಗಿತ್ತು.
ಈ ಕುರಿತು ಮಾಹಿತಿ ನೀಡಿದ ಕಾಶಿ ವಿಶ್ವನಾಥ ಮಂದಿರ ಟ್ರಸ್ಟ್‌ನ ಅಧ್ಯಕ್ಷ ನಾಗೇಂದ್ರ ಪಾಂಡೆ, ‘ನ್ಯಾಯಾಲಯದ ಆದೇಶದ ಮೇರೆಗೆ ನಾವು ಜ್ಞಾನವಾಪಿ ಮಸೀದಿಯ ವಜುಖಾನಾ ಬಳಿಯ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತದ ಸಹಾಯ ಕೋರಿದೆವು. ಅವರು ತಕ್ಷಣವೇ ಬಂದು ಅದನ್ನು ತೆರವುಗೊಳಿಸಿದರು. ಬಳಿಕ ವ್ಯಾಸ್ ಜೀ ಕಾ ಠಿಕಾನಾ’ದಲ್ಲಿರುವ ದೇಗುಲವನ್ನು ಶುಚಿಗೊಳಿಸಿ ರಾತ್ರಿ 10 ಗಂಟೆಯಿಂದ ಬೆಳಗ್ಗಿನ 3 ಗಂಟೆಯವರೆಗೆ ಶೃಂಗಾರ ಗೌರಿ ಮತ್ತು ಗಣೇಶನಿಗೆ ಮೊದಲ ಪೂಜೆ ನೆರವೇರಿಸಲಾಯಿತು