ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಂಚಿನ ಕಂಠದ, ನೇರ ನಡೆ ನುಡಿಯ ನಿಷ್ಟುರವಾದಿ ರಾಜಕಾರಣಿ ವಸಂತ ಬಂಗೇರ. ಅಪ್ಪಟ ತುಳು ಅಭಿಮಾನಿಯಾಗಿದ್ದ ಇವರು ವಿಧಾನ ಸೌಧದಲ್ಲಿ ತುಳುವಿನಲ್ಲೇ ಪ್ರಮಾಣ ವಚನ ಮಾಡುವ ಮೂಲಕ ತುಳುವರ ಮನ ಗೆದ್ದಿದ್ದರು. ಐದು ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿದ್ದರೂ ಅದೇ ಸರಳತೆ ಉಳಿಸಿಕೊಂಡವರು. ತನ್ನೂರಿನಲ್ಲಿ ಯಾವುದೇ ಗಲಾಟೆ, ಕುಟುಂಬ ಕಲಹ, ಮನಸ್ತಾಪ ನಡೆದರೆ ಅದನ್ನು ಠಾಣೆಯ ಮೆಟ್ಟಿಲೇರಲು ಬಿಡದೆ ಮಾತುಕತೆಯ ಮೂಲಕವೇ ಬಗೆಹರಿಸಲು ಇವರು ಆದ್ಯತೆ ನೀಡುತ್ತಿದ್ದರು. ಮಾನವೀಯ ಮೌಲ್ಯಗಳಿಗೆ ಬೆಲೆಕೊಡುವ ಅಪರೂಪದ ರಾಜಕಾರಣಿ ನೆನಪಿನಂಗಳಕ್ಕೆ ಜಾರಿದ್ದಾರೆ