ಬೈಂದೂರು: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ನ, ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ, ಕುಂದಾಪುರ ತಾಲೂಕಿನ,ಹೆಮ್ಮಾಡಿಯ ಕಟ್ಟುವಿನಲ್ಲಿ, ಸಿಂಚನಾಳಿಗೆ,ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆಯವರ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿದ ನೂತನ ಮನೆ ‘ಸರಸ್ವತೀ ನಿಲಯ’ ಮೇ 30 ರಂದು ಉದ್ಘಾಟನೆಗೊಂಡಿತು. ಕೃಷ್ಣಪ್ರಸಾದ್ ಅಡ್ಯಂತಾಯರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ ಗಂಟಿಹೊಳೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಪರ ಕೆಲಸಗಳು ಅಗಾಧವಾದುದು. ಅವರು ವಿದ್ಯಾಪೋಷಕ್ ಗೆ ಹಾಗೂ ಮನೆ ನಿರ್ಮಾಣಕ್ಕೆ ಆಯ್ಕೆ ಮಾಡುವ ವಿಧಾನವೇ ಅತ್ಯಂತ ವೈಜ್ಞಾನಿಕ. ಕನಿಷ್ಟ ವೆಚ್ಚದಲ್ಲಿ ವಾಸಯೋಗ್ಯ ಮನೆ ಕಟ್ಟಿಕೊಡುವ ಯೋಜನೆ ಬೇರೆಡೆ ಕಾಣಸಿಗದು. ದಾನಿಗಳು ನೀಡುವ ಹಣ ಪೋಲಾಗದಂತೆ ಅವರು ವಹಿಸುವ ಕಾಳಜಿಗೆ ಶರಣು ಎಂದು ಹೇಳಿದರು.