ಅಮಾಸೆಬೈಲು : ಡ್ಯುಯಲ್ ಸ್ಟಾರ್ ಎಜುಕೇಶನ್ ಶಾಲೆ ಅಮಾಸೆಬೈಲು ಇಲ್ಲಿ ವಿಜ್ಞಾನ ತರಬೇತಿ ಕಾರ್ಯಗಾರ ನಡೆಯಿತು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ 10 ಸಂಸ್ಥೆಗಳಿಂದ 15 ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.
ಡ್ಯುಯಲ್ ಸ್ಟಾರ್ ಎಜುಕೇಶನ್ ಶಾಲೆ ಅಮಾಸೆಬೈಲು ಸಂಸ್ಥೆಯ ಸಂಚಾಲಕರು ಶ್ರೀ ಶಶಿಧರ ದೇವಾಡಿಗ ತರಬೇತಿ ಕಾರ್ಯಗಾರವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ನಮ್ಮ ಶಾಲೆಯಲ್ಲಿ ವಿಜ್ಞಾನ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ತಾವೆಲ್ಲರೂ ಪಡೆಯುವಂತಾಗಲಿ ಎಂದರು
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತಾವಿಕ ಮಾತನಾಡುತ್ತಾ ಶಿಕ್ಷಕರು ವಿದ್ಯಾರ್ಥಿಗಳನ್ನು ತಲುಪಲು , ಬೋಧನೆ ಶಿಶುಕೇಂದ್ರೀತವಾಗಲು ಆಶಾದಾಯಕವಾಗಲು ತರಬೇತಿ ಅನಿವಾರ್ಯವಾಗಿದೆ ಎಂದು ಹೇಳಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಸಿದ್ಧಾಪುರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಶಿಕ್ಷಕರು ಜ್ಞಾನ ಸಂಪನ್ನರು ನಿರಂತರವಾಗಿ ಹೊಸದಾದ ವಿಷಯಗಳನ್ನು ತಿಳಿಯುತ್ತ ಅರಿವು , ತಿಳುವಳಿಕೆ , ಪ್ರಸ್ತುತ ಜ್ಞಾನವನ್ನು ಸಂಪಾದಿಸಿಕೊಳ್ಳುತ್ತಿರಬೇಕು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ತನ್ನ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರಿಗೆ ಆಯೋಜಿಸಿದ ವಿಜ್ಞಾನ ಕಾರ್ಯಗಾರ ಇದಾಗಿದ್ದುಅಮೃತ ಭಾರತಿ ಪ್ರೌಢಶಾಲೆ ಹೆಬ್ರಿ , ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ, ಶ್ರೀರಾಮ ವಿದ್ಯಾ ಕೇಂದ್ರ ಕೋಡಿ , ಶಾಂತಿಧಾಮ ಪೂರ್ವಗುರುಕುಲ ಕೋಟೇಶ್ವರ, ಡ್ಯುಯಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಅಮಾಸೆಬೈಲು,ಸೇವಾಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ , ಸರಸ್ವತಿ ವಿದ್ಯಾಲಯ ಸಿದ್ದಾಪುರ , ಯು,ಎಸ್ ನಾಯಕ್ ಪ್ರೌಢಶಾಲೆ ಪಟ್ಲ, ಆರ್. ಕೆ .ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿ, ಶ್ರೀ ಜನಾರ್ದನ ಶಾಲೆ ಎಳ್ಳಾರೆ, ಲೋಕಮಾನ್ಯ ತಿಲಕ ಹಿರಿಯ ಪ್ರಾಥಮಿಕ ಶಾಲೆ ಪಟ್ಲ ಶಿಕ್ಷಕರು ಭಾಗವಹಿಸಿದ್ದರು .
ಕುಮಾರಿ ಸೌಮ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ರಾಧಿಕ ರಾವ್ ಸ್ವಾಗತಿಸಿದರು