Home » ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣೆ
 

ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣೆ

ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ

by Kundapur Xpress
Spread the love

ಬಾರಕೂರು : ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರಿನಲ್ಲಿ ಬಹುಮಾನ ವಿತರಣಾ ಸಮಾರಂಭ ಮತ್ತು ವಾರ್ಷಿಕೋತ್ಸವ ನಡೆಯಿತು . ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬಾರಕೂರು ಎಜುಕೇಶನಲ್ ಸೊಸೈಟಿ (ರಿ )ಇದರ ಅಧ್ಯಕ್ಷರಾದ ಶ್ರೀ ಬಿ. ಶಾಂತಾರಾಮ ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದೆಹಲಿಯ ಜೆ. ಎನ್. ಯು. ನ ನಿವೃತ್ತ ಪ್ರೊಫೆಸರ್ ಆಗಿರುವ ಶ್ರೀ ಡಾ ಸಕಾರಾಮ ಸೋಮಯಾಜಿ , ಬಾರಕೂರು ಎಜುಕೇಷನಲ್ ಸೊಸೈಟಿ (ರಿ )ಬಾರಕೂರಿನ ಉಪಾಧ್ಯಕ್ಷರಾದ ಶ್ರೀ ಬಿ. ಸೀತಾರಾಮ್ ಶೆಟ್ಟಿ , ಬಾರಕೂರು ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ಗಣೇಶ ಶೆಟ್ಟಿ, ಹೊಸ ಕಾರ್ಕಡ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಎನ್. ಸುಧೀರ್ ಕಾಮತ್, ಶಾಲೆಯ ಸಂಚಾಲಕರಾದ ಶ್ರೀ ರಾಜಾರಾಮ್ ಶೆಟ್ಟಿ, ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ದೀಪಕ್ ಮತ್ತು ಶಾಲಾ ಮುಖ್ಯಸ್ಥ ರಾದ ಶ್ರೀಮತಿ ಲಿಖಿತಾ ಕೊಠಾರಿ ರವರು ಉಪಸ್ಥಿತರಿದ್ದರು.

ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ಯನ್ನು ಬಾರಕೂರು ಎಜುಕೇಶನ್ ಸೊಸೈಟಿ (ರಿ )ಬಾರಕೂರಿನ ಉಪಾಧ್ಯಕ್ಷರಾದ ಶ್ರೀ ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ ವಹಿಸಿದ್ದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಕುಂದಾಪುರದ ಛೇರ್ಮನ್ ಆಗಿರುವ ಶ್ರೀ ಡಾ. ರಮೇಶ ಶೆಟ್ಟಿ, ಎಸ್. ವಿ. ವಿ.ಎನ್.ಆಂಗ್ಲ ಮಾಧ್ಯಮ ಶಾಲೆ ಹೇರಾಡಿಯ ನಿವೃತ್ತ ಸಂಚಾಲಕರಾದ ಶ್ರೀ ಡಾ.ಬಿ. ಎಮ್.ಸೋಮಯಾಜಿ, ಶೆಟ್ಟಿಗಾರ್ ಇಂಡಸ್ಟ್ರೀಸ್ ರಂಗನಕೆರೆಯ ಮಾಲಕರದ ಶ್ರೀ ಶ್ರೀನಿವಾಸ ಶೆಟ್ಟಿಗಾರ್, ಲಾಲಿತ್ಯ ಕನ್ಸ್ ಟ್ರಕ್ಷನ್ ನ ಮಾಲಕರದ ಶ್ರೀ ಪ್ರವೀಣ್ ಆಚಾರ್, ರಂಗನಕೆರೆ, ಶಾಲೆಯ ಹಳೆ ವಿದ್ಯಾರ್ಥಿ ಅಶ್ವಿನಿ ಉಡುಪ, ಬಾರಕೂರು ಎಜುಕೇಶನ್ ಟ್ರಸ್ಟ್ (ರಿ )ಬಾರಕೂರಿನ ಕಾರ್ಯದರ್ಶಿ ಯಾದ ಶ್ರೀ ಅಶೋಕ ಕುಮಾರ್ ಶೆಟ್ಟಿ, ಬಿ. ಇ. ಎಸ್ ನ ಕೋಶಾಧಿಕಾರಿ ಶ್ರೀ ಕೃಷ್ಣ ಹೆಬ್ಬಾರ,ಬಿ. ಇ. ಎಸ್ ಆಡಳಿತಕ್ಕೆ ಒಳಪಟ್ಟ ಸಂಸ್ಥೆಗಳ ಆಡಳಿತ ಸ0ಯೋಜಕರಾದ ಶ್ರೀ ಆರ್ಚಿ ಬಾಲ್ಡ್ ಫುಟಾರ್ದೋ . ಶಾಲೆಯ ಸಂಚಾಲಕರಾದ ಶ್ರೀ ರಾಜಾರಾಮ್ ಶೆಟ್ಟಿ , ಬಾರಕೂರು ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಲಲಿತಾ, ಶಾಲೆಯ ರಕ್ಷಕ ಶಿಕ್ಷಕರ ಸಂಘ ದ ಅಧ್ಯಕ್ಷರಾದ ಶ್ರೀ ಜಯರಾಮ್ ಆಚಾರ್,ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ ಶಾಲಾ ಮುಖಂಡ ಪ್ರತೀಕ ಶೆಟ್ಟಿ ಉಪಸ್ಥಿತರಿದ್ದರು

ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ದಲ್ಲಿ ಶಾಲೆಯ ನಿವೃತ್ತ ಸಂಚಾಲಕರಾದ ಶ್ರೀ ಡಾ. ಬಿ.ಎಮ್. ಸೋಮಯಾಜಿ ಮತ್ತು ಶಾಲೆಯ ಕನ್ನಡ ಶಿಕ್ಷಕರಾದ ಶ್ರೀ ಪೂರ್ಣೇಶ್ ರವರನ್ನು ಸನ್ಮಾನಿಸಲಾಯಿತು.
2022-23 ಸಾಲಿನ ಎಸ್. ಎಸ್.ಎಲ್. ಸಿ ಯಲ್ಲಿ 100% ಫಲಿತಾಂಶ ಬಂದ ಕಾರಣ ಈ ಸಾಲಿನ ವಿದ್ಯಾರ್ಥಿ ಗಳು ಮತ್ತು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ರಾಜಗೋಪಾಲ್ ನಂಬಿಯಾರ್ ರವರ ನೇತೃತ್ವದಲ್ಲಿ ಶಾಲೆಯ ಶಿಕ್ಷಕ -ಶಿಕ್ಷಕೇತರರನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯರಾದ ಶ್ರೀಮತಿ ಬ್ರಿಜಿತ್ ಗೊನ್ಸಾಲ್ವಿಸ್ , ಶ್ರೀಮತಿ ಮಧುಶ್ರೀ, ಶ್ರೀಮತಿ ಜ್ಯೋತಿ ಶೆಟ್ಟಿ ನಿರೂಪಿಸಿದರು, ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು , ಶ್ರೀಮತಿ ಸುಜಾತಾ.ಎಲ್. ರೈ ಮತ್ತು ಶ್ರೀಮತಿ ಅಪರ್ಣ ವಂದಿಸಿದರು.

 

Related Articles

error: Content is protected !!