Home » ವಿಪ್ರಕೂಟ ವಿನೂತನ ಕಾರ್ಯಕ್ರಮ
 

ವಿಪ್ರಕೂಟ ವಿನೂತನ ಕಾರ್ಯಕ್ರಮ

by Kundapur Xpress
Spread the love

ಕೋಟ : ಇಲ್ಲಿನ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ನೇತೃತ್ವದಲ್ಲಿ ವಿನೂತನ ಮಾದರಿಯ ವಿಪ್ರ ಕೂಟ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವೊಂದನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಮನೆ ಮನೆಯಲ್ಲಿ ಪಸರಿಸಲು ಈ ವಿಪ್ರೇಯರು ಗುಂಪು ಗುಂಪಾಗಿ ಸೇರಿ ತಿಂಗಳೊಂದರಂತೆ ಒಂದೊಂದು ಮನೆಯನ್ನು ಆಯ್ಕೆಗೊಳಿಸಿ ಸಂಸ್ಕಾರದ ತೋರಣ ಕಟ್ಟಲು ಅಣಿಯಾಗಿದ್ದಾರೆ

ಅದರಂತೆ ಪ್ರತಿ ತಿಂಗಳ ಯಾವುದಾದರೂ ಒಂದು ದಿನ ಆಯ್ಕೆಮಾಡಿಕೊಂಡು ಸಮುದಾಯದ ಮನೆಯಲ್ಲಿ ಸಭೆ ಸೇರಿ ಭಜನೆ,ಶ್ಲೋಕ,ನೃತ್ಯ,ಮರೆಯಾಗುತ್ತಿರುವ ಗ್ರಾಮೀಣ ಆಟಗಳು,ಗಾದೆ ಮಾತು,ಅಂತ್ಯಾಕ್ಷರಿ,ರಸಪ್ರಶ್ನೆ,ಶೋಭಾನೆ ಹಾಡು,ಜಾನಪದ ಹಾಡು ಹೀಗೆ ವಿವಿಧ ರೀತಿಯಲ್ಲಿ ಕಾರ್ಯೋನ್ಮುಖವಾಗಿದ್ದಾರೆ.ಇದು ಅಲ್ಲದೆ ಕೊನೆಯಲ್ಲಿ ಗ್ರಾಮೀಣ ತಿಂಡಿ ತಿನಿಸುಗಳನ್ನು ಆಯ್ಕೆಯಾದ ಮನೆಯಲ್ಲಿ ಮಾಡಿ ತಾವುಗಳು ಬಡಿಸಿಕೊಂಡು ಸಮಾಜಕ್ಕೆ ಮಾದರಿ ಸಂದೇಶವನ್ನು ನೀಡುತ್ತಿದ್ದಾರೆ.ಇದಲ್ಲದೆ ಇದೇ ವಿಪ್ರ ತಂಡದ ಸದಸ್ಯರ ಮನೆಯ ಕೃಷಿ ಕಾಯಕಕ್ಕೂ ಸೈ ಎನಿಸಿಕೊಂಡು ವಿಪ್ರ ತಂಡದ ಮನೆಯ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.ಇದೊಂದು ಮಾದರಿ ಕಾರ್ಯಕ್ರಮ ಎಂದರೆ ಅತಿಶಯೋಕ್ತಿಯಲ್ಲ

ಸ್ನೇಹಕೂಟವೇ ಪ್ರೇರಣೆ
ಮಣೂರಿನ ಭಾರತೀ ಮಯ್ಯ ನೇತೃತ್ವದ ಸ್ನೇಹಕೂಟ ಈ ರೀತಿಯ ಕಾರ್ಯಕ್ರಮಗಳನ್ನು ಪ್ರಾರಂಭಗೊಳಿಸಿದ್ದು ಅದರ ಸದಸ್ಯರಾಗಿರುವ ವನೀತಾ ಉಪಾಧ್ಯರ ನೇತೃತ್ವದಲ್ಲಿ ವಿಪ್ರ ಮಹಿಳಾ ಬಳಗ ಈ ರೀತಿಯ ವಿನೂತ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಿದೆ.

ಮರೆಯಾಗುತ್ತಿರುವ ಪದ್ಧತಿಗಳನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಈ ವಿಪ್ರಕೂಟ ಹೊಸ ಪ್ರಯೋಗಕ್ಕೆ ನಾಂದಿಯಾಗಿದೆ ಎಂ<ಬ ನಂಬಿಕೆ ನಮ್ಮದು,ದೊಡ್ಡ ದೊಡ್ಡ ವೇದಿಕೆ ಹಂಚಿಕೊಳ್ಳಲು ಭಯಪಡುವ ಕಾಲಘಟ್ಟದಲ್ಲಿ ಈ ರೀತಿಯ ವಿನೂತವಾಗಿ ಮನೆಯಲ್ಲೆ ಕಾರ್ಯಕ್ರಮಗಳನ್ನು ಹಾಗೇ ಅವರ ಪ್ರತಿಭೆ ಅನಾವರಣಗೊಳ್ಳಲು ವೇದಿಕೆ ಕಲ್ಪಿಸುತ್ತದೆ.ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸಾಂಸ್ಕೃತಿಕವಾಗಿ ಮುನ್ನಲ್ಲೆಗೆ ಬರುತ್ತಿದ್ದಾರೆ.

ವನಿತಾ ಉಪಾಧ್ಯಾ ಸಂಚಾಲಕರು ವಿಪ್ರ ಮಹಿಳಾ ಬಳಗ ಸಾಲಿಗ್ರಾಮ

   

Related Articles

error: Content is protected !!