ಕೋಟ: ಸಾಂಪ್ರದಾಯಿಕ ಕೃಷಿ ಕಾಯಕಗಳಿಂದ ವಿಮುಖರಾಗಿ ಯಾಂತ್ರಿಕೃತ ಬೇಸಾಯಕ್ಕೆ ಪದ್ಧತಿಗೆ ಒಗ್ಗಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಸಾಲಿಗ್ರಾಮದ ವಿಪ್ರ ಮಹಿಳಾ ಬಳಗದ ಸದಸ್ಯರು ಸ್ವಯಂ ಪ್ರೇರಿತರಾಗಿ ಚಿತ್ರಪಾಡಿ ಗ್ರಾಮದ ಸಿ.ಮಂಜುನಾಥ ಉಪಾಧ್ಯರ ಮನೆಯ ಕೃಷಿಭೂಮಿಗಿಳಿದು ಭತ್ತದ ಸಸಿಗಳನ್ನು ನೆಡುವ ಮೂಲಕ ಜನರನ್ನು ಕೃಷಿ ಕಾಯಕದತ್ತ ಆಸಕ್ತರನ್ನಾಗಿಸುವ ಕಾರ್ಯಕ್ರಮ ಇತ್ತೀಚಿಗೆ ನಡೆಸಿದರು.
ವಿಪ್ರ ಬಳಗದ ಸಂಚಾಲಕಿ ವನಿತಾ ಉಪಾಧ್ಯರ ನೇತೃತ್ವದಲ್ಲಿ ಸಂಪನ್ನಗೊಂಡ ಈ ಕಾರ್ಯಕ್ರಮಕ್ಕೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಯುರಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಆರ್.ಸುರಾಗ್ ಭತ್ತದ ಸಸಿ ನೆಡುವ ಮೂಲಕ ಚಾಲನೆಯನ್ನು ನೀಡಿದರು. ಮೂವತ್ತಕ್ಕೂ ಅಧಿಕ ಮಹಿಳಾ ಬಳಗದ ಸದಸ್ಯರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.