ಕೋಟ : ಕೋಟದ ಹಂದೆ ವಿಷ್ಣುಮೂರ್ತಿ ಶ್ರೀವಿನಾಯಕ ದೇವಸ್ಥಾನ ಇಲ್ಲಿನ ಆಡಳಿತ ಮಂಡಳಿಯ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಅಮರ ಹಂದೆ ಆಯ್ಕೆಯಾಗಿದ್ದಾರೆ.
ಹಂದೆ ಕುಟುಂಬಸ್ಥರಿಗೆ ಸೇರಿದ ಈ ದೇಗುಲದಲ್ಲಿ ಇತ್ತೀಚೆನ ವರ್ಷದಲ್ಲಿ ಅಮರ ಹಂದೆಯವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನೆರವೇರಿದ್ದು ಇದೀಗ ನ್ಯಾಯಾಲಯದ ಆದೇಶದನ್ವಯ ರಾಜ್ಯ ಧಾರ್ಮಿಕ ಪರಿಷತ್ ಆಡಳಿತ ಮಂಡಳಿಗೆ ನೇಮಕ ಮಾಡಿದೆ.