ಕೋಟ : ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಆಶ್ರಯದಲ್ಲಿ ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ ನೇತೃತ್ವದಲ್ಲಿ ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾಕಾರ್ಯಕ್ರಮ ಸೋಮವಾರ ಜರಗಿತು.
ಈ ಸಂದರ್ಭದಲ್ಲಿ ವಿಶ್ವಕರ್ಮ ಕುಲಕಸುಬಿನ ಹಿರಿಯ ಸಾಧಕರಾದ ಗಿಳಿಯಾರು ಕೊಗ್ಗ ಆಚಾರ್ ದಂಪತಿ,ಪಾರಂಪಳ್ಳಿ ಸಂಜೀವ ಆಚಾರ್ ದಂಪತಿ,ವಡ್ಡರ್ಸೆ ನೀರ್ಕೋಡ್ಲು ರುದ್ರಯ್ಯ ಆಚಾರ್ ದಂಪತಿ,ಕ್ರೀಡಾಸಾಧಕಿ ಸಂಜನಾ ಆಚಾರ್ ಇವರುಗಳನ್ನು ಸನ್ಮಾನಿಸಲಾಯಿತು. ವಿಶ್ಚಕರ್ಮ ಸಮಾಜದ ಯುವ ಸಾಧಕರಾದ ಚೇಂಪಿ ದಿನೇಶ್ ಆಚಾರ್,ಅಜಿತ್ ಆಚಾರ್,ಕುಶ ಆಚಾರ್ ಬನ್ನಾಡಿ,ಸೃಷ್ಠಿ ಜೆ ಆಚಾರ್ ಗುಂಡ್ಮಿ ಇವರುಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು
ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಕಡ ಗೋಪಾಲಕೃಷ್ಣ ಆಚಾರ್ ಸ್ಮರಣಾರ್ಥ ದತ್ತಿನಿಧಿಯನ್ನು ವಿತರಿಸಲಾಯಿತು.ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಿವೃತ್ತ ಶಿಕ್ಷಕ ನಾರಾಯಣ ಆಚಾರ್ ಹಾಗೂ ಕಾರ್ಕಡ ರಮೇಶ್ ಆಚಾರ್ ಇವರುಗಳನ್ನು ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಎಂ.ಸುಬ್ರಾಯ ಆಚಾರ್ ವಹಿಸಿದ್ದರು.
ಒಎನ್‍ಜಿ.ಸಿ ಮುಂಬೈ ನಿವೃತ್ತ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಶುಭಾಶಂಸನೆಗೈದರು.
ಮುಖ್ಯ ಅಭ್ಯಾಗತರಾಗಿ ಉಡುಪಿ ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಪಾರಂಪಳ್ಳಿ ಶ್ರೀಕಾಂತ್ ಆಚಾರ್ , ವಿಶ್ವಜ್ಯೋತಿ ಬಳಗದ ಉಪಾಧ್ಯಕ್ಷೆ ಲಿಲಾವತಿ ಆನಂದ್ ಆಚಾರ್ ಉಪಸ್ಥಿತರಿದ್ದರು.ಸನ್ಮಾನ ಪತ್ರವನ್ನು ಕೋಶಾಧಿಕಾರಿ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಜತೆ ಕಾರ್ಯದರ್ಶಿ ರಮೇಶ್ ಆಚಾರ್ ಚೇಂಪಿ, ಕಲಾವೃಂದದ ಪ್ರಮುಖರಾದ ಗಜೇಂದ್ರ ಆಚಾರ್,ನವೀನ್ ಆಚಾರ್,ಜಗದೀಶ್ ಆಚಾರ್ ಸನ್ಮಾನ ವಾಚಿಸಿದರು.ವಿರಾಡ್ವಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಗೌರವಾಧ್ಯಕ್ಷ ಜನಾರ್ದನ ಆಚಾರ್ ಪ್ರಾಸ್ತಾವನೆ ಸಲ್ಲಿಸಿದರು.
ವಿಶ್ಚಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ ಸ್ವಾಗತಿಸಿದರು.ಕಾರ್ಯಕ್ರವನ್ನು ಕಲಾವೃಂದದ ಮಾಜಿ ಕಾರ್ಯದರ್ಶಿ ಅಜಿತ್ ಆಚಾರ್ ನಿರೂಪಿಸಿದರು.ಸಾಲಿಗ್ರಾಮ,ಶ್ರೀ ವಿರಾಡ್ವಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಕಾರ್ಯದರ್ಶಿ ಕೇಶವ ಆಚಾರ್ ವಂದಿಸಿದರು.ಕಲಾವೃಂದದ ಕಾರ್ಯದರ್ಶಿ ನಿತ್ಯಾನಂದ ಆಚಾರ್ ಕೋಟ ,ಕೋಶಾಧಿಕಾರಿ ರಾಘವೇಂದ್ರ ಆಚಾರ್ ಚೇಂಪಿ ಸಹಕರಿಸಿದರು.ವಿಶ್ವಕರ್ಮಕಲಾವೃಂದ ಸಾಲಿಗ್ರಾಮ ನೇತೃತ್ವದಲ್ಲಿ ವಿಶ್ವಕರ್ಮ ಯಜ್ಞ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಕುಲಕಸುಬಿನ ಹಿರಿಯ ಸಾಧಕರಾದ ಗಿಳಿಯಾರು ಕೊಗ್ಗ ಆಚಾರ್ ದಂಪತಿಗಳನ್ನು ಸನ್ಮಾನಿಸಲಾಯಿತು.