ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್
ಕುಂದಾಪುರ : ಇಂದು ಆಸಾಡಿ ಅಮಾವಾಸ್ಯೆ ಆಗಿದ್ದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿಶ್ವಕುಂದಾಪ್ರ ಕನ್ನಡ ದಿನಾಚರಣೆ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಕುಂದಾಪ್ರ ಕನ್ನಡದ ವಾಗ್ನಿ ಮನು ಹಂದಾಡಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕಿರಣ್ ಕುಮಾರ ಕೊಡ್ಡಿ ಅಧ್ಯಕ್ಷತೆ ವಹಿಸುವರು. ರಂಗ ಕಲಾವಿದ, ಚಲನಚಿತ್ರ ನಟ ರಘು ಪಾಂಡೇಶ್ವರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಡಾ. ಗಣೇಶ್ ಗಂಗೊಳ್ಳಿ ಮತ್ತು ತಂಡದವರಿಂದ ಜನಪದಗೀತೆ ಗಾಯನ, ಕುಂದಾಪುರದ ಕುಳ್ಳಪ್ಪು ತಂಡದವರಿಂದ ‘ಗಿರಾಕಿಯೇ ಇಲ್ಲಾ ಮಾರಾಯಾ’ ಎಂಬ ನಗೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಲಾಕ್ಷೇತ್ರ ಟ್ರಸ್ಟ ಕುಂದಾಪುರದ ಅಧ್ಯಕ್ಷರಾದ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ
ಬೀಜಾಡಿ ಮಿತ್ರ ಸೌಧ ಕೋಟೇಶ್ವರ
ಬೀಜಾಡಿ- ಗೋಪಾಡಿ ಮಿತ್ರ ಸಂಗಮ, ರೋಟರಿ ಕ್ಲಬ್ ಕುಂದಾಪುರ ರಿವರ್‌ಸೈಡ್, ರೋಟರಿ ಸಮುದಾಯದಳ ಬೀಜಾಡಿ- ಗೋಪಾಡಿ ಆಶ್ರಯದಲ್ಲಿ 6ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಹಾಗೂ ಪವರೈನ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಬೀಜಾಡಿ ಮಿತ್ರಸೌಧದಲ್ಲಿ ಇಂದು 6.15ಕ್ಕೆ ನಡೆಯಲಿದೆ.
ಈ ಸಂದರ್ಭ ‘ಗುಣಮೇಲೋ, ಹಣಮೇಲೋ’ ವಿಷಯದ ಕುರಿತು ಕುಂದಗನ್ನಡ ಹರಟೆ ಕಾಠ್ಯಕ್ರಮವನ್ನು ತನುಜಾ ಕೋಟೇಶ್ವರ, ಸುಪ್ರಿಯಾ ಪುರಾಣಿಕ, ಸತೀಶ್ ವಡ್ಡರ್ಸೆ, ಮಂಜುನಾಥ ಗುಂಡ್ಮಿ ಭಾಗವಹಿಸಲಿದ್ದು, ಶಿಕ್ಷಕ ನರೇಂದ್ರ ಕುಮಾರ್ ಕೋಟ ಸಮನ್ವಯಗಾರರಾಗಿ ಸಹಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ
ಕುಂದಕನ್ನಡ ಭಾಷಾಭಿವೃದ್ದಿ ವೇದಿಕೆ
ಕುಂದಾಪುರ ನಗರದ ಬಂಟರ ಯಾನೆ ನಾಡವರ ಸಂಘದ ಗಿಳಿಯಾರು ಕುಶಲ ಹೆಗ್ಡೆ ಸಭಾ ಭವನದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಕುಂದಕನ್ನಡ ಭಾಷಾಭಿಮಾನಿಗಳ ವಿಚಾರ ವಿನಿಮಯ ಸಭೆ ಎರ್ಪಡಿಸಲಾಗಿದ್ದು ಬಿ.ಅಪ್ಪಣ್ಣ ಹೆಗ್ಡೆ ಆವರ್ಸೆ ಸುಧಾಕರ ಶೆಟ್ಟಿ ಹಾಗೂ ಯು ಎಸ್ ಶಣೈ ಭಾಗವಹಿಸಲಿದ್ದಾರೆ