ತೆಕ್ಕಟ್ಟೆ : ನವೆಂಬರ್ 14 ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಶ್ವವಿನಾಯಕ ಸಿ. ಬಿ. ಎಸ್. ಇ. ಶಾಲೆಯಲ್ಲಿ ವಿವಿಧ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ಪ್ರಭಾಕರ ಶೆಟ್ಟಿಯವರು ನೆಹರೂರವರ ಭಾವಚಿತ್ರಕ್ಕೆ ಪುಪ್ಷ ನಮನಗಳನ್ನು ಸಲ್ಲಿಸಿ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿ ಹೇಳಿದರು. ರಾಷ್ಟ್ರದ ಪ್ರಥಮ ಪ್ರಧಾನ ಮಂತ್ರಿ ನೆಹರೂರವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಯಶಸ್ಸನ್ನು ಗಳಿಸಬೇಕೆಂದು ಮಕ್ಕಳಿಗೆ ಕರೆ ನೀಡಿದರು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಮ್. ರತ್ನಾಕರ ಶೆಟ್ಟಿಯವರು ಮಕ್ಕಳಿಗೆ ಶುಭ ಕೋರಿದರು.ಶಾಲಾ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಹೆಚ್.ರವರು ಮಾತನಾಡಿ ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು, ರಾಷ್ಟ್ರ ನಿರ್ಮಾಣ ಯುವ ಪೀಳಿಗೆಯ ಕೈಯಲ್ಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಹಾಗೂ ಶಿಕ್ಷಕ ವೃಂದದವರಿಂದ ವಿವಿಧ ಸಾಂಸ್ಕçತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಾಗೆಯೇ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ನಿತಿನ್ ಡಿ’ ಆಲ್ಮೇಡಾ, ವಿದ್ಯಾರ್ಥಿಗಳು, ಅದ್ಯಾಪಕರು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತುಷಾರ ಕಾರ‍್ಯಕ್ರಮ ನಿರೂಪಿಸಿದರು, ವಾರಿಧಿ ಸ್ವಾಗತಿಸಿದರು, ಮುಶಿಲ್ ವಂದಿಸಿದರು.