323
ಕುಂದಾಪುರ : ನಿವೃತ್ತ ಮುಖ್ಯೋಪಧ್ಯಾಯ ಹಾಗೂ ಸಾಮಾಜಿಕ ಧುರೀಣರಾದ ವಿಶ್ವನಾಥ್ ಹವಲ್ದಾರ್ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬುಧವಾರ ಬೆಳಿಗ್ಗೆ ನಿಧನ ಹೊಂದಿದರು ಅವರಿಗೆ 78 ವರ್ಷ ವಯಸ್ಸಾಗಿತ್ತು
ವಿಶ್ವನಾಥ್ ಹವಲ್ದಾರ್ ರವರು ಟೀಚರ್ ಕೊ-ಆಪರೇಟಿವ್ ಬ್ಯಾಂಕ್ ಉಡುಪಿ ಮತ್ತು ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಕುಂದಾಪುರ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಅವರು ಶ್ರೀರಾಮ್ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಕುಂದಾಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಕುಂದಾಪುರ , ಹಾಗೂ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘ, ಕಿರಿಮಂಜೇಶ್ವರ ಇದರ ನಿರ್ಧೇಶಕರಾಗಿ ಕಾರ್ಯ ನಿರ್ವಹಿಸಿದ್ದರು ಕೋಡಿ ಜಟ್ಟಿಗರಾಯ ದೇವಸ್ಥಾನ ಕೋಟೆ ನಾಗ ಸನ್ನಿಧಿ ಇದರ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದ ಇವರು ಪತ್ನಿ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ
ಇವರ ಅಂತ್ಯ ಸಂಸ್ಕಾರವು ನಾಳೆ ಗುರುವಾರ ಬೆಳಿಗ್ಗೆ 9.00 ಗಂಟೆಗೆ ಕಿರಿಮಂಜೇಶ್ವರದಲ್ಲಿರುವ ಅವರ ಸ್ವಗೃಹದಲ್ಲಿ ನೆರವೇರಲಿದೆ

