ಉಡುಪಿ : ಉಡುಪಿಯ ವಿವೇಕಾನಂದ ಮಾರ್ಗದಲ್ಲಿರುವ ಅಜ್ಜರಕಾಡು ಸಮೀಪದ ವಾಣಿಜ್ಯ ತೆರಿಗೆ ಭವನದಲ್ಲಿ ಸುಧೀರ್ಘ 37 ವರ್ಷಗಳ ಕಾಲ ವೃತ್ತಿ ಜೀವನದಲ್ಲಿ ಪ್ರಸ್ತುತ ವಾಣಿಜ್ಯ ತೆರಿಗೆ ವಿಭಾಗದ ಇನ್ಸ್ಪೆಕ್ಟರ್ (CTI) ಆಗಿ ಸೇವೆ ಸಲ್ಲಿಸಿದ ಸುಬ್ರಹ್ಮಣ್ಯ ಶೆಟ್ಟಿಯವರಿಗೆ ಕುಂದಾಪುರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರು ಶುಭ ಹಾರೈಸಿದ್ದಾರೆ
ಸುಬ್ರಹ್ಮಣ್ಯ ಶೆಟ್ಟಿಯವರು ಪ್ರಾಮಾಣಿಕ ಅಧಿಕಾರಿಯಾಗಿ ಸರಳತೆಯ ವ್ಯಕ್ತಿತ್ವ ಹೊಂದಿದ್ದು ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಕಟ್ಟುವಲ್ಲಿ ಹಾಗೂ ಕುಂದಾಪುರ ತಾಲೂಕಿನಲ್ಲಿ ಕನ್ನಡ ವೇದಿಕೆ ಸಂಘಟಿಸಲು ಅಪಾರವಾಗಿ ಶ್ರಮಿಸಿದ್ದರು