Home » ಮಣೂರು ಪಡುಕರೆ : ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ
 

ಮಣೂರು ಪಡುಕರೆ : ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ

by Kundapur Xpress
Spread the love

ಕೋಟ : ಶತ ಶತಮಾನಗಳಿಂದ ಶೋಷಣೆಗೆ ಒಳಗಾದ ಹೆಣ್ಣು ಸಂಕಷ್ಟದ ಬದುಕನ್ನು ಅನುಭವಿಸುತ್ತಾ ತನ್ನ ಅಸ್ತಿತ್ವಕ್ಕೆ ಹೋರಾಟ ವಿಶ್ವದಾದ್ಯಂತ ನಡೆಸುತ್ತಾ ಬಂದಿದ್ದಾಳೆ. ನಾಗರಿಕತೆಯ ಕಾಲದಿಂದಲೂ ಹೆಣ್ಣು ತುಳಿತಕ್ಕೆ ಒಳಗಾಗುತ್ತಾ ತನಗಾದ ಅನ್ಯಾಯವನ್ನು ಬಚ್ಚಿಟ್ಟುಕೊಂಡು ತನ್ನ ವಂಶವನ್ನು ಬೆಳೆಸುತ್ತಾ ಬಂದ  ಸ್ತ್ರೀ ಇಂದು ಕುಲಸ್ತ್ರೀ  ಆಗಿದ್ದಾಳೆ.

ಈ ಹಿನ್ನೆಲೆಯಲ್ಲಿ ಮಾರ್ಚ್ 08ನ್ನು ವಿಶ್ವ ಮಹಿಳಾ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಿಕೊಳ್ಳುವ ಈ ದಿನ ನಿಜಕ್ಕೂ ಮಹತ್ತರವಾದುದು. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರದೇವತಾ ಎಂಬ ಶ್ಲೋಕದಂತೆ ಹೆಣ್ಣು ಎಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ಪುಸನ್ನರಾಗಿರುತ್ತಾರೆ ಎಂಬ ಮಹತ್ತರವಾದ ನಂಬಿಕೆ ಇದೆ. ಮಹಿ ಮತ್ತು ಇಳೆ ಎನ್ನುವುದು ಭೂಮಿಗೆ ಇರುವ ಹೆಸರು ಹಾಗೆ ಅದು ಒಂದಾದರೆ ಎರಡು ಭೂಮಿಯಾಗುಂತೆ ಮಹಿಳೆ ಶಕ್ತಿ ಸ್ವರೂಪಣಿ ಹಾಗಾಗಿ ಇವತ್ತು ಎಲ್ಲಾ ಹೆಣ್ಣು ಮಕ್ಕಳಿಗೂ ಮಹಿಳೆಯರಿಗೂ ವಿಶೇಷವಾಗಿ ಅಭಿವಂದನೆ ಸಲ್ಲಿಸಬೇಕಾದ ಕರ್ತವ್ಯವಾಗಿದೆ ಎಂದು ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ವಿ ಗಾಂವಕಾರ ನುಡಿದರು

ಶನಿವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ವತಿಯಿಂದ ಮಣೂರು ಪಡುಕರೆಯಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಶಿಕ್ಷಕರನನ್ನು ಹಾಗೂ ಮಹಿಳಾ ಸಿಬಂಧಿಗಳಿಗೆ ಪುಷ್ಪ ನೀಡಿ, ಗೌರವದ ಉಡುಗೊರೆ ಸಲ್ಲಿಸಿಕೊಂಡು ಅರಶಿನ ಕುಂಕುಮದ ಸೇವೆಯನ್ನು ಸಲ್ಲಿಸಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಹಶಿಕ್ಷಕರಾದ ರಾಮದಾಸ್ ನಾಯಕ್ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕರಾದ ಮಂಜುನಾಥ ಹೊಳ್ಳ ಶಿಕ್ಷಕರಾದ ರಾಜೀವ್, ಚಂದ್ರಶೇಖರ ಶೆಟ್ಟಿ, ಕುಮಾರ್ ಉಪಸ್ಥಿತರಿದ್ದರು. ಸಹ ಶಿಕ್ಷಕ ಹೆರಿಯ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

 

Related Articles

error: Content is protected !!