ಚಕ್ರವ್ಯೂಹದ ಕೋಟೆಯಲ್ಲಿ ಚಿಣ್ಣರ ಅಬ್ಬರ
ಉಪ್ಪುಂದ: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ(ರಿ) ಮಕ್ಕಿದೇವಸ್ಥಾನ ಬವಳಾಡಿ ಬಿಜೂರು ಇವರ ಆಶ್ರಯದಲ್ಲಿ ಶ್ರೀ ಜಟ್ಟಿಗೇಶ್ವರ ದೈವಸ್ಥಾನ ಗಂಟಿಹೊಳೆಯಲ್ಲಿ ಮಕ್ಕಿ ದೇವಸ್ಥಾನ ಮಕ್ಕಳ ಯಕ್ಷಗಾನ ಚಕ್ರವ್ಯೂಹ ಎಂಬ ಪೌರಾಣಿಕ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶನ ಮಾಡಲಾಯಿತು. ಸುಮಾರು 150ಕ್ಕೂ ಹೆಚ್ಚು ಮಕ್ಕಳನ್ನು ಒಳಗೊಂಡು ಮಕ್ಕಿ ದೇವಸ್ಥಾನದ ಇತಿಹಾಸದಲ್ಲಿ 30 ವರ್ಷದ ನಂತರ ದ್ವಿತೀಯ ಬಾರಿಗೆ ಚಕ್ರವ್ಯೂಹ ಎನ್ನುವ ಕಥಾ ಭಾಗವನ್ನು ಅದ್ದೂರಿಯಾಗಿ ಆಡಿ ತೋರಿಸಲಾಯಿತು ಈ ಸಂದರ್ಭದಲ್ಲಿ ವಾದ್ಯ ಬೇಂಡಿನ ಜೊತೆಗೆ ರಾಳ ಬೆಂಕಿಯು ಜನಾಕರ್ಷಣೆಗೊಂಡಿತು ಈ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೆ ನಿರ್ಧೇಶನ ನೀಡಿದ ಪ್ರಶಾಂತ ಮಯ್ಯರಿ ಹಾಗೂ ಮಕ್ಕಳನ್ನು ಸಂಘಟಿಸಿದ ಗಣಪತಿ ಭಟ್ ಇವರಿಗೆ ಸನ್ಮಾನ ಮಾಡಲಾಯಿತು ಹಿಮ್ಮೇಳದವರಿಗೂ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ನಾಗರಾಜ್ ಭಟ್ ಮಕ್ಕಿ ದೇವಸ್ಥಾನ,ಬಾಲಚಂದ್ರ ಭಟ್, ತಿರುಮಲೇಶ್ವರ ಭಟ್, ಅನಂತ ಭಟ್, ಗಣೇಶ್ ಪೂಜಾರಿ ಮಾಣೆಯಾಡಿ, ಉಮೇಶ್ ದೇವಾಡಿಗ, ರಮೇಶ್ ಪೂಜಾರಿ, ಚಂದ್ರ ದೇವಾಡಿಗ, ಚನ್ನ ಪೂಜಾರಿ, ವಿಘ್ನೇಶ್ ಆಚಾರ್ ಬವಳಾಡಿ ,ಗೋಕುಲ್ ದೇವಾಡಿಗ,ಚಂದ್ರ ಕಾಡಿನತಾರು,ಉದಯ್ ಮಿಯಾಣಿ,ನಾಗರಾಜ್, ದಿನಕರ ಉಪಸ್ಥಿತರಿದ್ದರು ರಾಘವೇಂದ್ರ ಆಚಾರ್ ಕಟ್ಟಿನಮಕ್ಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು