ಕೋಟ: ಇತ್ತೀಚಿಗೆ ಬೆಂಗಳೂರಿನ ಯಕ್ಷದೇಗುಲ ಮಕ್ಕಳ ತಂಡದವರಿಂದ ಬೆಂಗಳೂರು ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ “ಕನ್ನಡ ಪರ್ವ” ಕಾರ್ಯಕ್ರಮದಲ್ಲಿ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ “ಅಭಿಮನ್ಯು ಕಾಳಗ” ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆ ವಾದನದಲ್ಲಿ ಸಂಪತ್ ಕುಮಾರ್, ಚಂಡೆವಾದನದಲ್ಲಿ ಪನ್ನಗ ಮಯ್ಯ ಹಾಗೆ ಮುಮ್ಮೇಳದಲ್ಲಿ ಮಕ್ಕಳಾದ ಧರ್ಮರಾಯ ಸರಸ್ವತಿ; ಅಭಿಮನ್ಯು ತೇಜಸ್; ಸುಭದ್ರೆ ಅನೀಶ; ಸೈಂಧವ ಮಹೇಶ್ವರ; ಕೌರವ ಧನ್ಯ; ದ್ರೋಣ ಶಾಶ್ವತ್; ಕರ್ಣ ಸುಹಾಸ್; ಶಲ್ಯ ಕ್ರಿಶ; ದುಶ್ಯಾಸನ ಅಹನ; ಎರಡನೇ ಅಭಿಮನ್ಯು ಅನಿಕ ಭಾಗವಹಿಸಿದರು. ಮೇಕಪ್ನಲ್ಲಿ ಬಾಲಕೃಷ್ಣ ಭಟ್, ಸುದರ್ಶನ ಉರಾಳ, ಉದಯ ಬೋವಿ ಮತ್ತು ವಿಶ್ವನಾಥ ಉರಾಳ್ ಸಹಕಾರ ನೀಡಿದರು.
ಈ ಸಂಧರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಕರ್ನಾಟಕ ಯಕ್ಷಗಾನ ಅಕಾಡೆಮಿ ಪುರಸ್ಕ್ರತ ಹೆರಂಜಾಲು ಸುಬ್ಬಣ್ಣ ಗಾಣಿಗರಿಗೆ ಬಿ.ಎಂ.ಸಿ.ಯ ಕನ್ನಡ ಪರ್ವ ಕಾರ್ಯಕ್ರಮದ ನೆನಪಿನ ಕಾಣಿಕೆ ನೀಡಲಾಯಿತು. ಹಾಗೆ ಅಭಿಮನ್ಯು ಕಾಳಗ ಕಾರ್ಯಕ್ರಮ ನೀಡಿದ ಯಕ್ಷದೇಗುಲ ಮಕ್ಕಳೊಂದಿಗೆ ಖುಷಿ ಹಂಚಿಗೊಂಡರು.
ಇತ್ತೀಚಿಗೆ ಬೆಂಗಳೂರಿನ ಯಕ್ಷದೇಗುಲ ಮಕ್ಕಳ ತಂಡದವರಿಂದ ಬೆಂಗಳೂರು ಮೆಡಿಕಲ್ ಕಾಲೇಜಿನ ಸಭಾಭವನದಲ್ಲಿ “ಕನ್ನಡ ಪರ್ವ” ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಕರ್ನಾಟಕ ಯಕ್ಷಗಾನ ಅಕಾಡೆಮಿ ಪುರಸ್ಕ್ರತ ಹೆರಂಜಾಲು ಸುಬ್ಬಣ್ಣ ಗಾಣಿಗರಿಗೆ ಬಿ.ಎಂ.ಸಿ.ಯ ಕನ್ನಡ ಪರ್ವ ಕಾರ್ಯಕ್ರಮದ ನೆನಪಿನ ಕಾಣಿಕೆ ನೀಡಲಾಯಿತು.