ಕೋಟ: ಯಕ್ಷಗಾನದ ಬೆಳವಣಿಗೆಗೆ ಪೂರಕವಾಗಿರಬೇಕಾದ ಅಭಿನಯ ಮತ್ತು ಮುದ್ರೆಗಳ ಬಗ್ಗೆ ಹಮ್ಮಿಕೊಂಡಿರುವ ಈ ಯಕ್ಷ ಮುದ್ರಾ ಕಾರ್ಯಾಗಾರ ಕಲಾವಿದರಿಗೆ ಉಪಯುಕ್ತವಾದದ್ದು. ಭರತ ನಾಟ್ಯದಂತಹ ಕಲೆಗಳಲ್ಲಿ ಪ್ರಾಮುಖ್ಯತೆ ಪಡೆದಿರುವಂತ ಹಸ್ತ ಮುದ್ರೆಗಳನ್ನು ಯಕ್ಷಗಾನದಲ್ಲಿ ಅಳವಡಿಸಿಕೊಂಡಾಗ ಯಕ್ಷಗಾನಕ್ಕೊಂದು ಶೋಭೆ ಬರುತ್ತದೆ. ವಿದ್ಯಾವಂತರು ಇಂದು ಕಲೆ ಸಂಸ್ಕøತಿಯತ್ತ ಒಲವು ತೋರಿಸುತ್ತಿರುವಾಗ ಯಕ್ಷಗಾನ ಕಲಾವಿದರು ಈ ಬಗ್ಗೆ ಜಾಗೃತರಾಗಬೇಕು. ಯಕ್ಷಗಾನ ಉಳಿವಿನ ಬಗ್ಗೆ ಕಳೆದ ಐವತ್ತು ವರ್ಷಗಳಿಂದ ಶ್ರಮಿಸುತ್ತಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ಈ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಕಲಾ ಕೇಂದ್ರದ ಅಧ್ಯಕ್ಷ ಆನಂದ ಸಿ ಕುಂದರ್ ಅಭಿಪ್ರಾಯ ಪಟ್ಟರು
ಕಲಾಕೇಂದ್ರದ ಸ್ಥಾಪಕ ಪ್ರಾಚಾರ್ಯ ಎಂ ನಾರ್ಣಪ್ಪ ಉಪ್ಪೂರರ ನಲವತ್ತನೆಯ ಪುಣ್ಯ ಸರಣೆಯ ನೆನಪಿನಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇವರು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಟಾನ ಕೊಂಡದಕುಳಿ ಇವರೊಂದಿಗೆ ಜಂಟಿಯಾಗಿ ಆಯೋಜಿಸಿದ್ದ “ಯಕ್ಷಮುದ್ರಾ” ಯಕ್ಷಗಾನ ಅಭಿನಯ – ಮುದ್ರೆಗಳ ಕಾರ್ಯಾಗಾರದಲ್ಲಿ ಆನಂದ್ ಸಿ ಕುಂದರ್ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ನಾಟ್ಯ ವಿದುಷಿ ಸುಮಂಗಲಾ ರತ್ನಾಕರ, ಪ್ರಾಚಾರ್ಯ ಸದಾನಂದ ಐತಾಳ, ಉಪ್ಪೂರರ ಪುತ್ರ ದಿನೇಶ ಉಪ್ಪೂರರು ಉಪಸ್ಥಿತರಿದ್ದರು.
ಕೊಂಡದಕುಳಿ ರಾಮಚಂದ್ರ ಹೆಗಡೆ, ನಾಟ್ಯ ವಿದುಷಿ ಸುಮಂಗಲಾ ರತ್ನಾಕರ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಆಮಂತ್ರಿತ ಹದಿನೈದು ಹಿರಿಯ ಕಲಾವಿದರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಕಾರ್ಯಾಗಾರದ ಉಪಯೋಗ ಪಡೆದುಕೊಂಡರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಸದಾನಂದ ಐತಾಳರು ಪ್ರಸ್ಥಾವನೆಯಲ್ಲಿ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಪತ್ರಕರ್ತ ಅಂಬರೀಶ್ ಭಟ್ಟ ಕಾರ್ಯಾUರವನ್ನು ಸಂಯೋಜಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳರು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.