Home » ಕಾಳಿಂಗ ನಾವಡರು ಹಾಗೂ ಧಾರೇಶ್ವರರ ನುಡಿನಮನ ಕಾರ್ಯಕ್ರಮ
 

ಕಾಳಿಂಗ ನಾವಡರು ಹಾಗೂ ಧಾರೇಶ್ವರರ ನುಡಿನಮನ ಕಾರ್ಯಕ್ರಮ

by Kundapur Xpress
Spread the love

ಕೋಟ : ನೆನಪಿನಂಗಳದಲ್ಲಿ ನಾವಡರು ಹಾಗೂ ಧಾರೇಶ್ವರರ ನುಡಿನಮನ ಕಾರ್ಯಕ್ರಮ ಇತ್ತೀಚಿಗೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆಯಲ್ಲಿ ಜರಗಿತು.

ಇದೇ ವೇಳೆ ಚಾರ ಪ್ರದೀಪ ಹೆಬ್ಬಾರ್ ವಿರಚಿತ ಉಲೂಪಿ ನಂದನ ಯಕ್ಷಗಾನ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಶ್ರೀ ಮಹಿಷಮರ್ದಿನೀ ಯಕ್ಷಕಲಾ ಪ್ರತಿಷ್ಠಾನದ ಕಲಾವಿದರಿಂದ ನಡೆಯಿತು.

ಕಾರ್ಯಕ್ರಮವನ್ನು ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿ ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಇಂತಹ ಮಹಾ ಸಾಧಕರ ಸಂಸ್ಮರಣೆ ಅರ್ಥಪೂರ್ಣ, ಕಲಾರಾಧನೆಯ ಸಂಯೋಜಿಕರಿಗೆ ಪ್ರೋತ್ಸಾಹ ನೀಡುವ ಅಗತ್ಯತೆಯನ್ನು ಒತ್ತಿ ಹೇಳಿದರು.

ಹಲವಾರು ಸಂದರ್ಭಗಳಲ್ಲಿ ಕಾಳಿಂಗ ನಾವಡರು ಸಹಕಲಾವಿದರನ್ನು ತಿದ್ದುವ ಜತೆಗೆ ರಂಗದಲ್ಲಿ ಸಮರ್ಥವಾಗಿ ಮುನ್ನೆಡುಸುತ್ತಿದ್ದರು. ಹಾಗೂ ನಾವಡರು ತನ್ನ32 ವರ್ಷದಲ್ಲಿ ಜೀವಿತಾವಧಿವನ್ನು ಸಾಧನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಮನ್ನಣೆಯನ್ನು ನೀಡಬೇಕು ಅವರರ ಹೆಸರಿನಲ್ಲಿ ಒಂದು ಕರ್ನಾಟಕ ಸರಕಾರ ಮೌಲ್ಯಾದರಿತವಾದ ಪ್ರಶಸ್ತಿಯನ್ನು ಸರಕಾರ ಕಲಾವಿದರಿಗೆ ನೀಡಬೇಕು ಎಂದು ಸಾಹಿತಿ ಡಾ. ಶ್ರೀಕಾಂತ ಸಿದ್ಧಾಪುರ ಒತ್ತಾಯಿಸಿದರು.

ಭಾಗವತ ದಿ.ಸುಬ್ರಹ್ಮಣ್ಯ ಧಾರೇಶ್ವರರ ಕುರಿತು ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ ನುಡಿನಮನ ಸಲ್ಲಿಸಿದರು. ಪ್ರಸಂಗಕರ್ತ ಡಾ. ಶಿವಕುಮಾರ್ ಅಳಗೋಡು ಅಭಿನಂದನಾ ನುಡಿಗಳನ್ನಾಡಿದರು. ಇರ್ವರ ಸನ್ಮಾನ ಪತ್ರವನ್ನು ಕವನಾಲಂಕಾರ ಕವನವನ್ನು ಸಂಘಟಕ ಚಾರ ಪ್ರದೀಪ ಹೆಬ್ಬಾರ್ ವಾಚಿಸಿದರು.

ಈ ಸಂದರ್ಭದಲ್ಲಿ ಕಲಾವಿದ ರಾಮಕೃಷ್ಣ ಮಂದರ್ತಿಯವರನ್ನು ಸನ್ಮಾನಿಸಲಾಯಿತು. ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರನಾಥ ಹೊಳ್ಳ,ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ. ರಾಮಚಂದ್ರ ಐತಾಳ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಪ್ರಸಂಗಕರ್ತ ಚಾರ ಪ್ರದೀಪ ಹೆಬ್ಬಾರ್ ಪ್ರಸ್ತಾವನೆಗೈದು, ಸ್ವಾಗತಿಸಿದರು.

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ವಂದಿಸಿದರು. ನಂತರ ಉಲೂಪಿ ನಂದನ ಯಕ್ಷಗಾನ ತಾಳಮದ್ದಳೆ ಹರಿಹರಪುರ ಶಿವಶಂಕರ ಭಟ್, ದೇವದಾಸ್ ರಾವ್ ಕೂಡ್ಲಿ, ರಾಮಕೃಷ್ಣ ಮಂದರ್ತಿಯವರ ಹಿಮ್ಮೇಳ, ವೈಕುಂಠ ಹೇರ್ಳೆ ಗುಂಡ್ಮಿ, ಆನಂದ ಭಟ್ ಕೆಕ್ಕಾರ್, ಸತೀಶ ಬೇಳೆಂಜೆ, ಡಾ. ಶಿವಕುಮಾರ್ ಅಳಗೋಡು, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು, ಚಾರ ಪ್ರದೀಪ ಹೆಬ್ಬಾರ್ ಮುಂತಾದ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ನಡೆಯಿತು.

 

 

 

 

ನೆನಪಿನಂಗಳದಲ್ಲಿ ನಾವಡರು ಹಾಗೂ ಧಾರೇಶ್ವರರ ನುಡಿನಮನ ಕಾರ್ಯಕ್ರಮದಲ್ಲಿ ಕಲಾವಿದ ರಾಮಕೃಷ್ಣ ಮಂದರ್ತಿಯವರನ್ನು ಸನ್ಮಾನಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಪ್ರಸಂಗಕರ್ತ ಡಾ. ಶಿವಕುಮಾರ್ ಅಳಗೋಡು, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರನಾಥ ಹೊಳ್ಳ,ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ. ರಾಮಚಂದ್ರ ಐತಾಳ ಉಪಸ್ಥಿತರಿದ್ದರು.

 

ಕೋಟ.ಜು.೧೬ ಯಕ್ಷಗಾನ

 

Related Articles

error: Content is protected !!