Home » ವಡ್ಡರ್ಸೆ ಮಹಾಲಿಂಗೇಶ್ವರ ಕಲಾರಂಗಕ್ಕೆ ಯಕ್ಷ ಪರಿಕರಗಳ ಹಸ್ತಾಂತರ
 

ವಡ್ಡರ್ಸೆ ಮಹಾಲಿಂಗೇಶ್ವರ ಕಲಾರಂಗಕ್ಕೆ ಯಕ್ಷ ಪರಿಕರಗಳ ಹಸ್ತಾಂತರ

by Kundapur Xpress
Spread the love

ಕೋಟ : ಯಕ್ಷಗಾನ ಕ್ಷೇತ್ರಕ್ಕೆ ಇಂದಿನ ದಿನಗಳಲ್ಲಿ ಹವ್ಯಾಸಿ ಯಕ್ಷ ಕಲಾರಂಗದ ಕೊಡುಗೆ ಅಪಾರ, ಯಕ್ಷಗಾನದ ಎಲ್ಲಾ ಆಯಾಮಗಳಿಗೂ ತನ್ನನ್ನು ತಾನು ತೊಡಗಿಸಿಕೊಂಡು ಕಲಾಮಾತೆಯ ಕಲಾಸೇವೆಗೈಯುತ್ತಾ,ಸ್ಥಳೀಯ ಮಕ್ಕಳಿಗೂ ಯಕ್ಷಗಾನದ ತಾಳ ಹೆಜ್ಜೆಗಳನ್ನು ನುರಿತ ಗುರುಗಳ ಮುಖೇನ ಕಲಿಸಿ,ನಿರಂತರವಾಗಿ ಮಕ್ಕಳಿಂದಲೇ ಪ್ರದರ್ಶನವನ್ನು ನೀಡುತ್ತಾ ಬಂದಿರುವ ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಇವರ ಕಲಾಸೇವೆ ನಿಜಕ್ಕೂ ಶ್ಲಾಘನೀಯವೆಂದು ಶ್ರೀ ಜನಾರ್ದನ ಮತ್ತು ಮಹಾಕಾಳೀ ದೇವಸ್ಥಾನ ಅಂಬಲಪಾಡಿ ಇದರ ಧರ್ಮದರ್ಶಿ ನೀ. ಬೀ.ವಿಜಯ ಬಲ್ಲಾಳರು ಹೇಳಿದರು.
ಅವರು ಇತ್ತೀಚಿಗೆ ಶ್ರೀ ಮಹಾಲಿಂಗೇಶ್ವರ ಕಲಾರಂಗಕ್ಕೆ ದೇವಸ್ಥಾನದ ವತಿಯಿಂದ ಸಹಾಯಧನವಾಗಿ ನೀಡಿದ ಹಣದಲ್ಲಿ ಕಲಾರಂಗವು ಖರೀದಿಸಿದ ಯಕ್ಷಗಾನ ವೇಷಭೂಷಣ, ಗೆಜ್ಜೆ, ಸೇರಿದಂತೆ ವಿವಿಧ ಪರಿಕರಗಳನ್ನು ಧರ್ಮದರ್ಶಿಯವರು ದೇವಳದಲ್ಲಿ ಶ್ರೀ ದೇವರಿಗೆ ಸಮರ್ಪಿಸಿ ಕಲಾರಂಗಕ್ಕೆ ಹಸ್ತಾಂತರಿಸಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಕಲಾರಂಗದ ಅಧ್ಯಕ್ಷ ಸಚಿನ್ ಶೆಟ್ಟಿ, ಖಜಾಂಚಿ ಗುರುಪ್ರಸಾದ್ ಐತಾಳ್ , ಜೊತೆ ಕಾರ್ಯದರ್ಶಿ ಪದ್ಮನಾಭ ಆಚಾರ್ಯ, ಸದಸ್ಯರಾದ ವಿಘ್ನೇಶ್ ಶೆಟ್ಟಿ, ನಾಗರಾಜ ಆಚಾರ್ಯ, ನಾಗೇಂದ್ರ ಅಡಿಗ,ರಾಘವೇಂದ್ರ ದೇವಾಡಿಗ ಉಪಸ್ಥಿತರಿದ್ದರು

   

Related Articles

error: Content is protected !!