Home » ಯಕ್ಷಾಂತರಂಗದ ಸಾಂಸ್ಕ್ರತಿಕ  ಕಾರ್ಯಕ್ರಮ
 

ಯಕ್ಷಾಂತರಂಗದ ಸಾಂಸ್ಕ್ರತಿಕ  ಕಾರ್ಯಕ್ರಮ

by Kundapur Xpress
Spread the love

ಕೋಟ : ಕತ್ತಲನ್ನು ಹೋಗಲಾಡಿಸುವುದಕ್ಕೆ ಮತ್ತೆ ಮತ್ತೆ ಯಕ್ಷರಂಗದಲ್ಲಿ ದೀಪವನ್ನು ಬೆಳಗುತ್ತಿರುತ್ತದೆ. ಕರಾವಳಿ ಭಾಗದಲ್ಲಿ ಎಷ್ಟೇ ಮಳೆ ಬರಲಿ, ಬಿಸಿಲಿರಲಿ ಯಕ್ಷರಂಗದ ದೀಪವು ಬೆಳಗುತ್ತಿರುತ್ತದೆ. ದಣಿದು ದುಡಿದ ಒಂದಂಶವನ್ನು ಕಲಾ ಪ್ರಪಂಚಕ್ಕೆ ಕೊಡುಗೆಯಾಗಿ ಕೊಡುವ ಸದ್ಗುಣ ಸಜ್ಜನರಲ್ಲಿ ಸದಾ ಕಾಲ ಬರಲಿ. ಇದರಿಂದಾಗಿ ಮತ್ತಷ್ಟು ಎತ್ತರಕ್ಕೆ ಕಲೆ ಬೆಳೆದು ಬೆಳಕಾಗಲಿ ಎಂದು ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಯಕ್ಷಾಂತರಂಗದ ಸಾಂಸ್ಕ್ರತಿಕ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಜು. 13ರಂದು ಕೇಂದ್ರ ಸಂಸ್ಕ್ರತಿ ಇಲಾಖೆ ನವದೆಹಲಿ ಪ್ರಾಯೋಜಕತ್ವದ ಯಕ್ಷಾಂತರಂಗ ಕೋಟ ಪ್ರಸ್ತುತಿಯ ಯಕ್ಷಗಾನ ‘ಅಂಬೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಗಣಪತಿ ಟಿ. ಶ್ರೀಯಾನ್ ಮಾತನ್ನಾಡಿದರು.
ಯಕ್ಷಗಾನ ರಂಗಭೂಮಿಯಲ್ಲಿ ವೇಷಭೂಷಣ ತಜ್ಞರಾಗಿ ಸುದೀರ್ಘ ಕಾಲ ವಿಶಿಷ್ಟವಾದ ಕೊಡುಗೆಯನ್ನು ಕೊಡುತ್ತಾ, ಸೇವೆ ಸಲ್ಲಿಸಿದ ಹಿರಿಯ ಆಹಾರ್ಯ ತಜ್ಞರಾದ ಹಂದಾಡಿ ಬಾಲಕೃಷ್ಣ ನಾಯಕ್ ಪ್ರೇಕ್ಷಕರ ಕಣ್ಣಿಗೆ ಕಾಣದೇ ಕೇವಲ ನೇಪತ್ಯ ಕಲಾವಿದರಾಗಿ ಪುರಾಣ ಲೋಕದ ಪಾತ್ರಗಳನ್ನು ವೇಷದ ಮೂಲಕ, ಸುಂದರವಾದ ಕಟ್ಟೋಣದ ಮೂಲಕ ರಂಗ ಮಂಚಕ್ಕೆ ಪರಿಚಯಿಸುತ್ತಿದ್ದ ಹಿರಿಯ ಕಲಾವಿದರು. ಪುರಾಣ ಲೋಕದ ಅನೇಕ ಸಂಗತಿಗಳನ್ನು ಬಲ್ಲವರಾಗಿ ಪುರಾಣ ಲೋಕದ ವೇಷಗಳು ಹೀಗೆಯೇ ರಂಗದಲ್ಲಿ ಮೂಡಿ ಬರಬೇಕೆನ್ನುವ ಸ್ಪಷ್ಟ ಕಲ್ಪನೆಯುಳ್ಳ ಬಾಲಣ್ಣ, ರಂಗದಲ್ಲಿನ ವ್ಯತಿರಿಕ್ತ ವೇಷಗಳನ್ನು ಸಾತ್ವಿಕವಾದ ಕ್ರೋದವನ್ನು ವ್ಯಕ್ತಪಡಿಸುತ್ತಿದ್ದವರು. ಯಕ್ಷಗಾನ ರಂಗಭೂಮಿಯ ಬಗೆಗಿನ ಅತ್ಯಂತ ಪ್ರೀತಿಯಿಂದಲೇ ತನ್ನ ಮೂವರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ, ಸಮರ್ಥ ಕಲಾವಿದರನ್ನಾಗಿ ಯಕ್ಷ ರಂಗಭೂಮಿಗೆ ಉಡುಗೊರೆಯಾಗಿ ಕೊಟ್ಟವರು ಎಂದು ಪ್ರಸಂಗಕರ್ತ, ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಂಸ್ಮರಣಾ ನುಡಿಗಳನ್ನಾಡಿದರು.
‘ಸಿನ್ಸ್ 1999 ಶ್ವೇತಯಾನ- 42’ರ ಕಾರ್ಯಕ್ರಮದಡಿಯಲ್ಲಿ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಸಹಕಾರದೊಂದಿಗೆ ಪ್ರದರ್ಶಿಸಿದ ರಂಗ ಪ್ರಸ್ತುತಿಗೆ ಅಧ್ಯಕ್ಷತೆಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಉದ್ಯಮಿ ಸುಬ್ರಾಯ ಆಚಾರ್, ಗೆಳೆಯರ ಬಳಗ ಕಾರ್ಕಡದ ಅಧ್ಯಕ್ಷರಾದ ತಾರಾನಾಥ ಹೊಳ್ಳ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಕ್ಷಾಂತರಂಗ ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳ, ಯಕ್ಷಗಾನ ಜಾಗೃತಿ ವೇದಿಕೆಯ ರಾಘವ ಶೆಟ್ಟಿ ಬೇಳೂರು ಉಪಸ್ಥಿತರಿದ್ದರು. ಕೇಂದ್ರ ಸಂಸ್ಕøತಿ ಇಲಾಖೆ ನವದೆಹಲಿ ಪ್ರಾಯೋಜನೆಯಲ್ಲಿ ಯಕ್ಷಾಂತರಂಗ ತಂಡದ ಕಲಾವಿದರಿಂದ ‘ಅಂಬೆ’ ಯಕ್ಷಗಾನ ಪ್ರಸಂಗ ರಂಗ ಪ್ರಸ್ತುತಿಗೊಂಡಿತು.

   

Related Articles

error: Content is protected !!