.ಕೋಟ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಡಬೆಟ್ಟು ಕಾರ್ಯಕ್ಷೇತ್ರದ ಒಕ್ಕೂಟ ಸಭೆ ಮತ್ತು ಶಂಕರ ತತ್ವದ ಕುರಿತು ಕಾರ್ಯಕ್ರಮ ಭಾನುವಾರ ಯಡಬೆಟ್ಟು ಮಾಣಿ ಚೆನ್ನಕೇಶವ ದೇಗುಲ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಶ್ರೀ ಶಂಕರ ತತ್ವ ಸಮಿತಿಯ ಸಂಘಟನಾ ಕಾರ್ಯದರ್ಶಿ ಸವಿತಾ ಎರ್ಮಳ ಶ್ರೀ ಶಂಕರ ತತ್ವದ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬ್ರಹ್ಮವಾರ ತಾಲೂಕಿನ ಯೋಜನಾಧಿಕಾರಿ ರಮೇಶ್ ಸಿ.ಕೆ ಶ್ರೀ ಕ್ಷೇತ್ರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಯವರು ,ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಯವರು , ಶೌರ್ಯ ಟಿಮ್‍ನ ಸದಸ್ಯರು ,ವಿವಿಧ ತಂಡಗಳ ಪದಾಧಿಕಾರಿಗಳು, ಸದಸ್ಯರುಉಪಸಿತರಿದ್ದರು. ತಂಡದ ಸದಸ್ಯರಾದ ಕಾಳಿಂಗ ಸ್ವಾಗತಿಸಿದರು, ದಿನೇಶ್ ವಂದಿಸಿದರ.ಕಾರ್ಯಕ್ರಮವನ್ನು ಶೇಖರ್ ನಿರೂಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಡಬೆಟ್ಟು ಕಾರ್ಯಕ್ಷೇತ್ರದ ಒಕ್ಕೂಟ ಸಭೆ ಮತ್ತು ಶಂಕರ ತತ್ವ ಬಗ್ಗೆ ಕಾರ್ಯಕ್ರಮ ಯಡಬೆಟ್ಟು ಮಾಣಿ ಚೆನ್ನಕೇಶವ ದೇಗುಲ ಸಭಾಂಗಣದಲ್ಲಿ ಜರಗಿತು. ಉಡುಪಿ ಜಿಲ್ಲಾ ಶ್ರೀ ಶಂಕರ ತತ್ವ ಸಮಿತಿಯ ಸಂಘಟನಾ ಕಾರ್ಯದರ್ಶಿ ಸವಿತಾ ಎರ್ಮಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬ್ರಹ್ಮವಾರ ತಾಲೂಕಿನ ಯೋಜನಾಧಿಕಾರಿ ರಮೇಶ್ ಸಿ.ಕೆ ಮತ್ತಿತರರು ಇದ್ದರು.