Home » ಯೋಗ ಶಿಕ್ಷಣ – ಉಚಿತ ತರಬೇತಿ
 

ಯೋಗ ಶಿಕ್ಷಣ – ಉಚಿತ ತರಬೇತಿ

by Kundapur Xpress
Spread the love

ಕುಂದಾಪುರ : ಇಲ್ಲಿನ ಯೋಗಬಂಧು ಮತ್ತು ಹೋಟೆಲ್ ಪಾರಿಜಾತ ಆಶ್ರಯದಲ್ಲಿ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ವಿಶ್ವಯೋಗ ದಿನಾಚರಣೆಯ ನಿಮಿತ್ತ ಉಚಿತ ಯೋಗ ಶಿಕ್ಷಣ ತರಬೇತಿ ಹಾಗೂ ಆರೋಗ್ಯ ಮಾಹಿತಿ ಶಿಬಿರ ಜೂ. 21 ರಂದು ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ

ನಿರಂತರ ಒಂದು ತಿಂಗಳು ನಡೆಯಲಿರುವ ಉಚಿತ ತರಭೇತಿ ಯೋಗ ಶಿಕ್ಷಣವನ್ನು ಕುಂದಾಪುರದ  ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಯೋಗ ಶಿಕ್ಷಕ ಪದ್ಮನಾಭ ಅಡಿಗರವರು ಅಧ್ಯಕ್ಷತೆ ವಹಿಸಲಿದ್ದು   ಕುಂದಾಪುರ ಕಾರ್ತಿಕ ಸ್ಕ್ಯಾನಿಂಗ್ ಸೆಂಟರ್ ವೈದ್ಯಾಧಿಕಾರಿ ಡಾ.ಬಿ.ವಿ. ಉಡುಪ, ಆಯುರ್ವೇದ ತಜ್ಞೆ ಡಾ. ಸೋನಿ, ವಿಜಯವಾಣಿ ಹಿರಿಯ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ ಪಾಲ್ಗೊಳ್ಳಲಿದ್ದಾರೆ.

25 ರಂದು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಡಾ. ನಾಗೇಶ್, ಜು. 2 ರಂದು ಆಯುರ್ವೇದ ತಜ್ಞ ಡಾ. ಶ್ರೀಧರ ಬಾಯಿರಿ, 9 ರಂದು ಉಡುಪಿ ನಾಗಾರ್ಜುನ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಮೊಹಮ್ಮದ್ ರಫೀಕ್ ಪಾಲ್ಗೊಳ್ಳಲಿದ್ದು ಯೋಗಬಂಧುsÀ ಸಂಜೀವಣ್ಣ ಯೋಗಾಭ್ಯಾಸ ನಡೆಸಿಕೊಡಲಿದ್ದಾರೆ. ಪ್ರತಿದಿನ ಸಂಜೆ 5.30 ರಿಂದ ರಾತ್ರಿ 8 ರ ತನಕ ಯೋಗಾಭ್ಯಾಸ ನಡೆಯಲಿದೆ.

   

Related Articles

error: Content is protected !!