ಕೋಟ: 10ನೇ ವಿಶ್ವಯೋಗ ದಿನಾಚರಣೆಯನ್ನು ವಿವೇಕ ಬಾಲಕಿಯರ ಪ್ರೌಢಶಾಲೆ,ಕೋಟದಲ್ಲಿ ಅರ್ಥಗರ್ಭಿತವಾಗಿ ಆಚರಿಸಲಾಯಿತು.
ಅತಿಥಿಗಳಾಗಿ ಕೋಟದ ಪ್ರಜ್ಞಾ ಟುಟೋರಿಯಲ್ಸ್‍ನ ಪ್ರಾಂಶುಪಾಲ ಪ್ರಕಾಶ್ ಭಟ್ ಚೇಂಪಿ ಇವರು, ಯೋಗ ಚಿತ್ತವೃತ್ತಿ ನಿರೋಧ ಎಂದು ಆರಂಭಿಸಿ ಮಕ್ಕಳಿಗೆ ಯೋಗದ ಮಹತ್ವ, ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಪ್ರಾಣಾಯಾಮದ ಉಪಯುಕ್ತತೆಯನ್ನು ಮನಮುಟ್ಟುವಂತೆ ವಿವರಿಸಿ, ಅದರ ಪ್ರಾತ್ಯಕ್ಷಿಕತೆಯನ್ನು ನೆರವೇರಿಸಿದರು. ನಂತರದಲ್ಲಿ ಎಲ್ಲಾ ಮಕ್ಕಳೂ ಪ್ರಾತ್ಯಕ್ಷಿಕತೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ ಶುಭ ಹಾರೈಸಿದರೆ, ದೈಹಿಕ ಶಿಕ್ಷಣ ಶಿಕ್ಷಕಿ ಮಮತ ಕಾರ್ಯಕ್ರಮ ಸಂಘಟಿಸಿದರು. ನರೇಂದ್ರ ಕುಮಾರ್, ರಾಧಾಕೃಷ್ಣ ಭಟ್, ವಿಜಯಲಕ್ಷ್ಮಿ, ಗಣೇಶ ಶೆಟ್ಟಿಗಾರ್, ಪುಷ್ಪಲತಾ, ಸುಮಂಗಲ, ನಾರಾಯಣಮೂರ್ತಿ, ಮಹಾಲಕ್ಷ್ಮಿ, ನಾಗರತ್ನ ಮತ್ತು ಕುಸುಮ ಸಹಕಾರವಿತ್ತರು.