Home » ಓಂ ಯೋಗ ವಿದ್ಯಾಮಂದಿರ : ಯೋಗ ಸಮ್ಮಿಲನ
 

ಓಂ ಯೋಗ ವಿದ್ಯಾಮಂದಿರ : ಯೋಗ ಸಮ್ಮಿಲನ

by Kundapur Xpress
Spread the love

ಕುಂದಾಪುರ : ಓಂ ಯೋಗ ವಿದ್ಯಾಮಂದಿರ (ರಿ) ಕೋಟೇಶ್ವರ, ಶ್ರೀ ಪತಂಜಲಿ ಯೋಗ ಸಮಿತಿ ಕುಂದೇಶ್ವರ, ಕುಂದಾಪುರ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಸಹಭಾಗಿತ್ವದಲ್ಲಿ ಯೋಗ ಸಮ್ಮಿಲನ- 2024  ಕಾರ್ಯಕ್ರಮವು ಸೆಪ್ಟೆಂಬರ್ 22ರಂದು ಕುಂದಾಪುರ ಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಚಾರ್ಟೆಡ್ ಪ್ರೆಸಿಡೆಂಟ್ ರೋಟರಿ ಬೆಂಗಳೂರು, ಗ್ಲೋಬಲ್ ಯೋಗ ಅಧ್ಯಕ್ಷರಾದ ಡಾ.ಯೋಗಿ ದೇವರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ,ರೋಗ ಮುಕ್ತ ಸಮಾಜಕ್ಕೆ, ವಿಶ್ವ ಶಾಂತಿಗೆ ಯೋಗವೇ ಪರಮೌಷಧ, ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಯೋಗ ನೆಲೆಸಬೇಕು ಎಂದರು.ವಿಶ್ವ ಯೋಗ ಸಮ್ಮೇಳನ -2024ರ ಪೂರ್ವಭಾವಿ ಸಮ್ಮೇಳನದ ಉದ್ದೇಶವನ್ನು ತಿಳಿಸಿದರು.ಅಂತರಾಷ್ಟ್ರೀಯ ಯೋಗಾಚಾರ್ಯರಾದ ಡಾ. ರಾಘವೇಂದ್ರ ಆರ್ ಪೈ ಅವರು ಮಾತನಾಡಿ, ದೇಹದ ನರಮಂಡಲಗಳ ಸೆಳೆತ, ಬಿಗಿತಗಳನ್ನು ಸಡಿಲಗೊಳಿಸುವ ಕ್ರಿಯಾತ್ಮಕ ಅಭ್ಯಾಸಗಳನ್ನು ಭಗವಂತನ ನಾಮಸ್ಮರಣೆಯೊಂದಿಗೆ ಮನದಟ್ಟು ಮಾಡಿಸಿದರು.ರೋ. ಜುಡಿತ್ ಮೆಂಡೋನ್ಸಾ ಅವರು ಮಾತನಾಡಿ, ಸ್ವಚ್ಛ ಮನಸ್ಸು, ಸ್ವಚ್ಛ ಸಮಾಜ ಕಟ್ಟಲು ಯೋಗದ ಅಗತ್ಯವಿದೆ ಎಂದರು.ಈ ಸಂದರ್ಭದಲ್ಲಿ ಲಾಸ್ಯ ಕುಂದಾಪುರ ಇವರಿಂದ ಯೋಗಾಸನ ಪ್ರದರ್ಶನ ನಡೆಯಿತು ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ರೋ. ಸಿಎ ದೇವ್ ಆನಂದ್ ಡಿಸ್ಟ್ರಿಕ್ ಗವರ್ನರ್ ಅವರು ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ವಿವರಿಸಿದರು.ಪೂರ್ವ ಗುರುಕುಲ ಶಾಲೆ ಶಾಂತಿಧಾಮ ಟ್ರಸ್ಟ್ ಇದರ ಮುಖ್ಯಸ್ಥರಾದ ಶ್ರೀ ಪ್ರೇಮಾನಂದ ಶೆಟ್ಟಿ ಕಟ್ಕೇರೆ, ಬಿ.ಅಣ್ಣಪ್ಪ ಶೆಟ್ಟಿಗಾರ, ಶ್ರೀ ವಿವೇಕ ಪೈ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಹಿರಿಯ ಯೋಗ ಸಾಧಕರನ್ನು ಮತ್ತು ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ತರಗತಿ ನಡೆಸಿದ ಅಧ್ಯಾಪಕರನ್ನು ಗೌರವಿಸಲಾಯಿತು.ಸನ್ಮಾನಿತರಾದ ಶ್ರೀ ಪಾಂಡುರಂಗ ಪೈ ಮತ್ತು ಕುಮಾರ ಶಂಕರನಾರಾಯಣ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಕಾರ್ಯಕ್ರಮಕ್ಕೆ ಕೋಟೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ಯೋಗಾಸಕ್ತರು ಬಹು ಸಂಖ್ಯೆಯಲ್ಲಿ ಆಗಮಿಸಿ ಉಪಯುಕ್ತ ಮಾಹಿತಿ ಪಡೆದುಕೊಂಡರು.ಶ್ರೀ ಶಂಕರ ಶೆಟ್ಟಿ ಸ್ವಾಗತಿಸಿದರು. ವಿವೇಕ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಗೀತಾ ಎಂ ಐತಾಳ್ ಪ್ರಾರ್ಥಿಸಿದರು. ಶ್ರೀಮತಿ ಶಶಿಕಲಾ ಬಿಜೂರು, ಶ್ರೀಮತಿ ಗೀತಾ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಗೀತಾ ಶೆಟ್ಟಿಗಾರ್ ಸಾಧಕರನ್ನು ಪರಿಚಯಿಸಿ, ವಂದಿಸಿದರು.

   

Related Articles

error: Content is protected !!