Home » ಯೋಗ ದಿನದ ಸಂದೇಶ
 

ಯೋಗ ದಿನದ ಸಂದೇಶ

by Kundapur Xpress
Spread the love

ಯೋಗ ದಿನದ ಸಂದೇಶ

ಉಡುಪಿ : ಪರ್ಯಾಯ ಸಂಚಾರದ ನಿಮಿತ್ತ ವಾರಣಾಸಿಗೆ ಆಗಮಿಸಿದ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರನ್ನು ಅತ್ಯಂತ ಪ್ರಾಚೀನ ವಿದ್ಯಾಸಂಸ್ಥೆಯಾದ ಕಾಶೀ ಹಿಂದೂ ವಿಶ್ವವಿದ್ಯಾಲಯದ ಮಾಲವೀಯ ಭವನದಲ್ಲಿ ಗೌರವಾದರಗಳಿಂದ ಸ್ವಾಗತಿಸಲಾಯಿತು ಅಂತಾರಾಷ್ಟ್ರೀಯ ಯೋಗ ದಿವಸದ ಹಿನ್ನೆಲೆಯಲ್ಲಿ ಗೀತಾ ಯೋಗದ ಆವಶ್ಯಕತೆಯನ್ನು ಶ್ರೀಪಾದರು ವಿವರಿಸಿದರು.

ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಗೀತಾ ಲೇಖನ ಯಜ್ಞದ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ಮಾಲವೀಯ ಭವನದ ನಿರ್ದೇಶಕರಾದ ಪ್ರೋ.ರಾಜಾರಾಮ್ ಶುಕ್ಲ , ಕಾಶಿಯ ಸಂಪೂರ್ಣಾನಂದ ವಿಶ್ವವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ ಪ್ರೋ. ವ್ರಜಭೂಷಣ ಓಝಾ ಮುಂತಾದವರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಭಗವದ್ಗೀತಾ ಉಪನ್ಯಾಸವನ್ನು ಆಯೋಜಿಸಿಲಾಯಿತು

   

Related Articles

error: Content is protected !!