Home » ಶ್ರೀ ಯೋಗಿಜೀಯವರಿಂದ ರೋಡ್ ಶೋ
 

ಶ್ರೀ ಯೋಗಿಜೀಯವರಿಂದ ರೋಡ್ ಶೋ

by Kundapur Xpress
Spread the love

ಕಾರ್ಕಳ:ರಾಷ್ಟ್ರ ವಿರೋಧಿ ಭಯೋತ್ಪಾದಕರ ಎದೆಯಲ್ಲಿ ನಡುಕ ಹುಟ್ಟಿಸಿದ ಬುಲ್ಡೋಜರ್ ಬಾಬಾ ಎಂದೇ ಖ್ಯಾತಿಯಾದ ಉತ್ತರ ಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ರವರು ಇಂದು ಕಾರ್ಕಳದಲ್ಲಿ ರೋಡ್‌ ಶೋ ನಡೆಸಲಿದ್ದಾರೆ   ಶ್ರೀ ಯೋಗಿ ಆದಿತ್ಯನಾಥ್ ರವರನ್ನುಹತ್ತಿರದಿಂದ ನೋಡಿ ಕಣ್ತುಂಬಿಸಿಕೊಳ್ಳಲು ಕಾರ್ಕಳ ಜನತೆ   ಇಂದು ಅಪರಾಹ್ನ 1:00 ಗಂಟೆಗೆ ಕಾರ್ಕಳ ನಗರದ ಅನಂತಶಯನ ವೃತ್ತದಿಂದ ಮುಖ್ಯರಸ್ತೆಯಲ್ಲಿ ಸಾಗಿ ಬರುವ ಬಿಜೆಪಿಯ ಶ್ರೀ ಯೋಗಿ ಆದಿತ್ಯನಾಥ ಜಿ ಯವರ ಬೃಹತ್ ರೋಡ್ ಶೋ” ಪಡು ತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಗಾಂಧಿ ಮೈದಾನದವರೆಗೆ ಸಾಗಿ ಬರಲಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದ 209 ಬೂತುಗಳಿಂದಲೂ ಬಿಜೆಪಿ ಕಾರ್ಯಕರ್ತರು ಹಿತೈಷಿಗಳು ಮತ್ತು ಮತದಾರ ಬಂಧುಗಳು 25,000 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಿಂದ ಶ್ರೀ ಯೋಗಿ ಆದಿತ್ಯನಾಥ ಜೀ ” ಬೃಹತ್ ರೋಡ್ ಶೋ “ಗೆ ಹೆಜ್ಜೆ ಜೋಡಿಸಲಿರುವರೆಂದು ಕಾರ್ಕಳ ಬಿಜೆಪಿ ವಕ್ತಾರ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿರುತ್ತಾರೆ

   

Related Articles

error: Content is protected !!