Home » ಯಾವುದೇ ಸವಾಲುಗಳನ್ನು ಎದುರಿಸಲು ಭಾರತ ಸಿದ್ಧ
 

ಯಾವುದೇ ಸವಾಲುಗಳನ್ನು ಎದುರಿಸಲು ಭಾರತ ಸಿದ್ಧ

ಚಕ್ರವರ್ತಿ ಸೂಲಿಬೆಲೆ

by Kundapur Xpress
Spread the love

ಕುಂದಾಪುರ : ಇಂದಿನ ಯುಗದಲ್ಲಿ ಭಾರತವು ಪ್ರಪಂಚದ ಯಾವುದೇ ಬಾಹ್ಯ ಆಕ್ರಮಣಗಳನ್ನು ಏದುರಿಸಲು ಸಿದ್ಧವಿದ್ದು ಭಾರತದ ಆಂತರಿಕ ಆಕ್ರಮಣಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ಯುವ ಬ್ರಿಗೆಡ್ ನ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆಯವರು ನುಡಿದರು

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತಕ್ಕೆ ಬಾಹ್ಯ ಆಕ್ರಮಣಗಳು ಕ್ಷೀಣಿಸುತ್ತಿದ್ದು ಆಂತರಿಕ ಶತ್ರುಗಳು ದುಪ್ಪಟ್ಟಾಗಿದ್ದು ಅವರನ್ನು ಮಟ್ಟ ಹಾಕುವ ಅಗತ್ಯತೆಯ ಬಗ್ಗೆ ನಗರದ ಚಿಕ್ಕನ್‌ ಸಾಲ್‌ ರಸ್ತೆಯ ಮೊಗವೀರ ಭವನದಲ್ಲಿ ನಡೆದ ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು

ಕಳೆದ 1500 ವರ್ಷಗಳಿಂದ ಭಾರತದ ಸಾಮಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಗಳ ಮೇಲೆ ನಿರಂತರ ಆಕ್ರಮಣಗಳಾಗಿದ್ದು ಇಂದಿಗೂ ಭಾರತ ಭಾರತವಾಗಿಯೇ ಉಳಿಯಲು ಇಲ್ಲಿಯ ಅಂತಃಶಕ್ತಿಯೇ ಕಾರಣವಾಗಿದ್ದು ಅದಕ್ಕಾಗಿ ನಮ್ಮ ಪೂರ್ವಜರು ಪ್ರಾತಃಸ್ಮರಣೀಯರಾಗಿದ್ದಾರೆ ಎಂದರು ಮೂರು ದಿನಗಳ ಸರಣಿ ಉಪನ್ಯಾಸದ ಮೊದಲ ದಿನದಲ್ಲಿ ಕ್ರಿಶ್ಚಿಯನ್‌ ರಿಂದ ಭಾರತದ ಮೇಲಾದ ಆಕ್ರಮಣಗಳು ಹಾಗೂ ಭಾರತವನ್ನು ಕ್ರಿಶ್ಚಿಯನ್‌ ದೇಶವನ್ನಾಗಿಸುವ ಷಢ್ಯಂತರದ ಬಗ್ಗೆ ಚಿತ್ರಮಾಲಿಕೆಯ ಮೂಲಕ ವಿವರಿಸಿದರು

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಎ ಎಸ್‌ ಎನ್‌ ಹೆಬ್ಬಾರ್‌ ರಾ ಸ್ವ ಸಂಘದ ಮುಖಂಡರಾದ ಸುಬ್ರಹ್ಮಣ್ಯ ಹೊಳ್ಳ ಗುರುರಾಜ್‌ ಕೋಟೇಶ್ವರ ಸತೀಶ್‌ ಕಾಳಾವರ್ಕರ್‌ ವಿಶ್ವಹಿಂದು ಪರಿಷತ್‌ ನ ಕಟ್ಕೇರಿ ಪ್ರೇಮಾನಂದ ಶೆಟ್ಟಿ  ಬಿಜೆಪಿ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಕಾರ್ಯದರ್ಶಿ ವಕ್ವಾಡಿ ಸತೀಶ್‌ ಪೂಜಾರಿ ಬಿಜೆಪಿ ಮಂಗಳೂರು ಪ್ರಭಾರಿ ರಾಜೇಶ್‌ ಕಾವೇರಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಹಾಗೂ ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಉಪಸ್ಥಿತರಿದ್ದರು   

ಇಂದು ಸಂಜೆ 5.00 ಗಂಟೆಗೆ 2 ನೇ ದಿನದ ಉಪನ್ಯಾಸ ಕಾರ್ಯಕ್ರಮವು ಜರುಗಲಿದೆ     

   

Related Articles

error: Content is protected !!