Home » ಯುವ ಮಿತ್ರ ವೃಂದ : 30ನೇ ವಾರ್ಷಿಕೋತ್ಸವ
 

ಯುವ ಮಿತ್ರ ವೃಂದ : 30ನೇ ವಾರ್ಷಿಕೋತ್ಸವ

by Kundapur Xpress
Spread the love

ಕುಂದಾಪುರ : ಯುವ ಮಿತ್ರ ವೃಂದ ಪಡುಕೇರಿ ಕುಂದಾಪುರ ಇವರ 30ನೇ ವಾರ್ಷಿಕೋತ್ಸವವು ಫೆಬ್ರವರಿ 28 ರಿಂದ ಮಾರ್ಚ್ 1ರ ವರೆಗೆ  ಅದ್ದೂರಿಯಾಗಿ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ  ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸ್ಪರ್ಧೆಗಳು ಜರುಗಿತು

ಮಹಿಳಾ ಯಕ್ಷಗಾನ, ಪುಟಾಣಿಗಳಿಂದ ಯಕ್ಷಗಾನ, ನೃತ್ಯ ಕಾರ್ಯಕ್ರಮ, ಛದ್ಮವೇಷ ಸ್ಪರ್ಧೆ ಹಾಗೂ ಶ್ರೀ ಮನು ಹಂದಾಡಿಯವರಿಂದ ನಗೆ ಹನಿ, ಸೇರಿದಂತೆ ಹಲವು ಮನೋರಂಜನಾತ್ಮಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ದಿನೇಶ್ ಕುಂದಾಪುರ (ಉದ್ಯಮಿಗಳು, ದಿನೇಶ್ ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್), ಶ್ರೀ ಪ್ರಮೋದ್ ಕುಮಾರ್ (ಪೊಲೀಸ್ ಇನ್ಸ್ಪೆಕ್ಟರ್, ಕರಾವಳಿ ಕಾವಲು ಪಡೆ, ಉಡುಪಿ), ಶ್ರೀ ರಾಜೇಶ್ ಕೆ ಸಿ (ಸೆಕೆಂಡ್ ಇನ್ ಕಮಾಂಡ್, ಗೃಹ ರಕ್ಷಕ ದಳ, ಉಡುಪಿ ಜಿಲ್ಲೆ), ಮತ್ತು ಸಭಾ ಅಧ್ಯಕ್ಷರಾಗಿ ಶ್ರೀ ನಾಗರಾಜ ಕಾಮಧೇನು, ಮಾಲಕರು ಕೊಕೊನಟ್ ಇಂಡಸ್ಟ್ರೀಸ್ ಕೋಟೇಶ್ವರ ಹಾಗೂ  ಅಧ್ಯಕ್ಷರು ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಹಾಗೂ ಶ್ರೀಮತಿ ಪ್ರಭಾವತಿ ಕೇಶವ ಅಧ್ಯಕ್ಷರು ಮಹಿಳಾ ಮಂಡಳಿ,ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ “ಯುವ ಮಿತ್ರ ಪ್ರಶಸ್ತಿಯನ್ನು” ಸಮಾಜ ಸೇವೆಗಾಗಿ ಶ್ರೀ ಸುರೇಂದ್ರ (ಸೂರಿ)ಯವರಿಗೆ ನೀಡಿ ಸನ್ಮಾನಿಸಲಾಯಿತು. , ಹಾಗೂ ರಾಷ್ಟ್ರೀಯ ವಾಲಿಬಾಲ್ ಆಟಗಾರ ಶ್ರೀ ಸೂರಜ್ ಕುಮಾರವರನ್ನು ಸನ್ಮಾನಿಸಲಾಯಿತು. ವಾರ್ಷಿಕ ಕ್ರೀಡೋತ್ಸವ, ಚಿತ್ರಕಲೆ, ರಂಗೋಲಿ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು

ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪ್ರಮೋದ್ ಕುಮಾರ್ ಅವರು ತಮ್ಮ ಭಾಷಣದಲ್ಲಿ, “ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲ, ಅವರಲ್ಲಿ ಸಂಸ್ಕಾರಗಳನ್ನು ಕೂಡ ಕಲಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು. “ಈ ಸಂಸ್ಕಾರಗಳು ಯುವ ಮಿತ್ರ ವೃಂದದ ಚಟುವಟಿಕೆಗಳಲ್ಲಿ ಸ್ಪಷ್ಟವಾಗಿ ಕಣ್ತುಂಬಿಕೊಳ್ಳುತ್ತಿವೆ.” ಎಂಬುದನ್ನು ವಿವರಿಸಿದರು.
ಶ್ರೀ ರಾಜೇಶ್ ಕೆ ಸಿ ಅವರು 1994 ರಲ್ಲಿ ಯುವ ಮಿತ್ರವೃಂದ ಸ್ಥಾಪನೆಯಾದ ಸಮಯದಿಂದ ಇದರ ಇತಿಹಾಸವನ್ನು ಸ್ಮರಿಸಿ, ಪಡುಕೇರಿ ಗ್ರಾಮಸ್ಥರ ಒಗ್ಗಟ್ಟಿನಿಂದಲೇ ಈ ಸಂಘ ಇಂದು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ನಾಗರಾಜ ಕಾಮಧೇನು ಅವರು, “ಯುವ ಮಿತ್ರ ವೃಂದದ ಆಧಾರಸ್ತಂಭವಾಗಿರುವ ಶ್ರೀ ಅಮರ್ ಕುಮಾರ್ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು

2024-25ನೇ ಸಾಲಿನಲ್ಲಿ ವಿವಿಧ ವಿಭಿನ್ನ ರೀತಿಯ ಕಾರ್ಯಕ್ರಮಗಳು ನಡೆದಿವೆ. ಕೆಸ್ರ್ ಗದ್ದೆ ಓಟದಂತಹ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯಲಿ, ಮುಂದಿನ ವಾರ್ಷಿಕೋತ್ಸವನ್ನು ಹೊಸ ಮಂಟಪದಲ್ಲೇ ನಡೆಸಲು ಪಡುಕೇರಿಯ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು. ಚಿಕ್ಕಮ್ಮ ದೇವಿಯನ್ನು ಭಕ್ತಿಯಿಂದ ಬೇಡಿಕೊಂಡರೆ ಎಲ್ಲ ಕೆಲಸಗಳು ಸುಲಭವಾಗುವುದು ಎಂದರು.

ಅಧ್ಯಕ್ಷರಾದ ಶ್ರೀ ಅಮರ್ ಕುಮಾರ್ ಅವರು, “2024-25ನೇ ಸಾಲಿನಲ್ಲಿ ನಾವು ಆಯೋಜಿಸಿದ ವನಮಹೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಶಿಕ್ಷಕರ ದಿನಾಚರಣೆ, ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮ, ರಕ್ಷಾಬಂಧನ, ಸತ್ಯನಾರಾಯಣ ಪೂಜೆ ಮತ್ತು ಅನ್ನ ಸಂತರ್ಪಣೆ, ದುರ್ಗಾ ಹೋಮ, ವಿದ್ಯಾ ನಿಧಿ ವಿತರಣೆ, ಉಚಿತ ಫೈಲೇರಿಯಾ ತಪಾಸಣಾ ಶಿಬಿರ, ಸ್ಥಳೀಯರ ಚಿಕಿತ್ಸೆಗಾಗಿ ಧನ ಸಹಾಯ ವಿತರಣೆ, ಕಾರ್ತಿಕ ದೀಪೋತ್ಸವ ಮತ್ತಿತರ ಕಾರ್ಯಕ್ರಮಗಳು ಯುವ ಮಿತ್ರವೃಂದ ಪೂರ್ವಾಧ್ಯಕ್ಷರು, ಪಧಾಧಿಕಾರಿಗಳು ಮತ್ತು ಸದಸ್ಯರ ಒಗ್ಗಟ್ಟು ಹಾಗು ಪಡುಕೇರಿ ಗ್ರಾಮಸ್ಥರ ಸಹಕಾರದಿಂದ ಈ ವರ್ಷದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಹಾಯವಾಯಿತು ಎಂದು ಅಭಿಪ್ರಾಯಪಟ್ಟರು ಮತ್ತು 2024-25 ನೇ ಸಾಲಿನಲ್ಲಿ ಸ್ಥಾಪಿಸಲಾದ “ತುರ್ತು ನಿಧಿ” ಯೋಜನೆಗೂ ಎಲ್ಲರ ಸಹಕಾರ ಕೋರಿದರು

ಶ್ರೀ ಮನಮೋಹನ್, (ನಿವೃತ್ತ ಪೊಲೀಸ್ ಉಪ ನೀರಿಕ್ಷಕರು) ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀ ಸಂಪತ್ ಕೆಳಮನೆ ಯವರು ಧನ್ಯವಾದ ಸಮರ್ಪಿಸಿದರು ಒಂಕಾರ್ ಕಲಾವಿದರ ತಂಡದಿಂದ “ವಾಚ್ ಮ್ಯಾನ್” ಎಂಬ ನಗೆ ನಾಟಕವು  ಪ್ರದರ್ಶನಗೊಂಡಿತು

 

Related Articles

error: Content is protected !!