ಕುಂದಾಪುರ : ಕುಂದಾಪುರ ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇವಸ್ಥಾನದ ನೀಲನಕ್ಷೆ ಬಿಡುಗಡೆ ಸಮಾರಂಭ ಹಾಗೂ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು

ಸಮಾರಂಭದ ಅಧ್ಯಕ್ಷತೆಯನ್ನು ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ನಾಗೇಶ್ ವಹಿಸಿದ್ದರು ಉದ್ಯಮಿ ದತ್ತಾನಂದರವರು ನೀಲನಕ್ಷೆ ಬಿಡುಗಡೆಗೊಳಿಸಿದರು ಮೈಲಾರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಬಿಲ್ಲವ ನೂತನ ಶಿಲಾಮಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು

ಮುಖ್ಯ ಅತಿಥಿಗಳಾಗಿ ಭಟ್ರಹಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸ್ಥಾಪಕ ಅಧ್ಯಕ್ಷರಾದ ರಾಮಕೃಷ್ಣ ಬಿಜೂರು ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಾಬರ್ಟ್ ರೆಬೆಲ್ಲೋ ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ ಆಗಮಿಸಿ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಫ್ರೆಂಡ್ಸ್ ಸರ್ಕಲ್ ಕುಂದಾಪುರ ಮೈಲಾರೇಶ್ವರ ಯುವಕ ಮಂಡಲ ಹಾಗೂ ಹೂವಿನ ವ್ಯಾಪಾರಸ್ಥರ ಸಂಘದ ಸದಸ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ ಹಾಗೂ ಪರಿಸರದ ನಾಗರಿಕರು ಉಪಸ್ಥಿತರಿದ್ದರು
ಪರಿಸರದ ನಿವಾಸಿಯಾದ ಪುಷ್ಪಾ ಅಣ್ಣಪ್ಪ ಶೇರಿಗಾರ್ ರವರು ಕೊಡಮಾಡಿದ 1 ಲಕ್ಷ ರುಪಾಯಿಯನ್ನು ಶ್ರೀಮತಿ ಶಲಿತಾ ಗಿರಿಧರ್ ರಾವ್ ರವರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ನಾಗೇಶ್ ರವರಿಗೆ ಹಸ್ತಾಂತರಿಸಿದರು
ಕಾವೇರಿ ರಾಜೇಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಯು ಸ್ವಾಗತಿಸಿ ಪ್ರಸ್ತಾವನೆಗೈದರು ಶ್ರೀಮತಿ ಶಲಿತಾ ಗಿರಿಧರ್ ರಾವ್ ಪ್ರಾರ್ಥಿಸಿ ರಾಜೇಶ್ ಕಾವೇರಿ ಧನ್ಯವಾದವಿತ್ತರು

