ಕುಂದಾಪುರ : ಬಾಡಿಗೆದಾರರೊಬ್ಬರು ಲಕ್ಷಾಂತರ ರೂ. ಮೌಲ್ಯದ ಮನೆಯ ಸೊತ್ತುಗಳನ್ನು ಕಳವು ಮಾಡಿದ ಘಟನೆ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಬಸ್ರೂರು ಗ್ರಾಮದ ರವಿ ಎಂಬವರು ತನ್ನ ತಾಯಿಯ ಮನೆಯನ್ನು ಸುಮಾರು ಮೂರು ತಿಂಗಳ ಹಿಂದೆ ಆವರ್ಸೆಯ ನಿವಾಸಿ ಸಂತೋಷ್ ಎಂಬವರಿಗೆ ವಾಸವಿರಲು ಬಾಡಿಗೆಗೆ ಕೊಟ್ಟಿದ್ದರು. ಸಂತೋಷ್ ಒಂದು ತಿಂಗಳ ಬಾಡಿಗೆ ಹಣವನ್ನು ನೀಡಿ ಉಳಿದ ಎರಡು ತಿಂಗಳ ಬಾಡಿಗೆ ಹಣವನ್ನು ಬಾಕಿ ಇರಿಸಿಕೊಂಡಿದ್ದರಿಂದ ರವಿ ಅವರು ಡಿ.2 ರಂದು ಮನೆಯ ಬಳಿಗೆ ಹೋಗಿ ನೋಡಿದಾಗ ಮನೆಯ ಎದುರಿನ ಬಾಗಿಲಿಗೆ ಬೀಗ ಹಾಕಿದ್ದರಿಂದ ವಾಪಸ್ಸು ಬಂದಿದ್ದರು.
ಡಿ.5 ರಂದು ಬಾಡಿಗೆ ಮನೆಗೆ ಹೋಗಿ ನೋಡಿದಾಗ ಮನೆಯ ಸಾಮಾಗ್ರಿ ಇಲ್ಲದ ಬಗ್ಗೆ ಅನುಮಾನಗೊಂಡು ಹಿಂದಿನ ಬಾಗಿಲು ತೆಗೆದು ನೋಡಿದಾಗ ಸುಮಾರು 1.04 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸಂತೋಷ್ ಅವರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.