Home » 13 ಜನರ ಕೊಂದ ಬಾಲಕಿ!
 

13 ಜನರ ಕೊಂದ ಬಾಲಕಿ!

ಪ್ರಿಯಕರನೊಂದಿಗೆ ಮದ್ದೆಗೆ ಅಡ್ಡಿ

by Kundapur Xpress
Spread the love

ಶ್ರೀನಗರ : ತಾನು ಪ್ರೀತಿಸಿದ ಯುವಕನ ಜೊತೆ ಮದುವೆಯಾಗಲು ಮನೆಯವರು ವಿರೋಧಿಸಿದ ಕಾರಣಕ್ಕೆ, ಬಾಲಕಿಯೊಬ್ಬಳು ಕುಟುಂಬದ 13 ಜನರಿಗೆ ಊಟದಲ್ಲಿ ವಿಷ ಹಾಕಿ ಕೊಂದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಬಾಲಕಿ ತನ್ನ ಪ್ರಿಯಕರನೊಂದಿಗೆ ಸಂಚು ರೂಪಿಸಿದ್ದಾಳೆ ಪ್ರಿಯಕರನ ಜೊತೆ ಸೇರಿ ತನ್ನ ಪೋಷಕರು ಸೇರಿದಂತೆ 13 ಜನರಿಗೆ ಊಟದಲ್ಲಿ ವಿಷ ಬೆರೆಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಊಟ ಸೇವಿಸಿದ ನಂತರ ಮನೆಯಲ್ಲಿದ್ದ 13 ಜನರು ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಕೂಡ ಬದುಕುಳಿಯಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ವಿಷಪೂರಿತ ಆಹಾರದಿಂದ ಸಾವನ್ನಪ್ಪಿರುವುದು ದೃಢವಾಗಿತ್ತು. ತನಿಖೆ ನಡೆಸಿದಾಗ ಬಾಲಕಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ರೊಟ್ಟಿ ಮಾಡಲು ಬಳಸುವ ಹಿಟ್ಟಿನಲ್ಲಿ ವಿಷ ಬೆರೆಸಿರುವುದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಬಾಲಕಿಯನ್ನು ಬಂಧಿಸಿದ್ದಾರೆ.

   

Related Articles

error: Content is protected !!