ಕುಂದಾಪುರ : ಪರವಾನಗಿ ಇಲ್ಲದೆ ಬಂಡೆಗಳನ್ನು ಸ್ಪೋಟಿಸಿದ ಆರೋಪದಲ್ಲಿ ಇಬ್ಬರನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ತಾಲ್ಲೂಕಿನ ಹಳ್ಳಿಹೊಳೆ ಗ್ರಾಮದ ಅರಮನೆ ಕೊಡ್ಲು ಎಂಬಲ್ಲಿ ಅನಂತಮೂರ್ತಿ ಭಟ್ ಎಂಬುವವರ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಕಲ್ಲು ಬಂಡೆಗಳನ್ನು ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಾಗದ ಮಾಲೀಕರಾದ ಅನಂತಮೂರ್ತಿ ಮತ್ತು ಅವರಿಗೆ ಸಹಕರಿಸಿದ ಪ್ರವೀಣ್ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ