Categories
ಅಪರಾಧ

ವೇಶ್ಯಾವಾಟಿಕೆ ಪತ್ತೆ : ಯುವತಿಯ ರಕ್ಷಣೆ

ಉಡುಪಿ : ನಗರದಲ್ಲಿ ಅನೈತಿಕವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲೊಂದಕ್ಕೆ ಪೊಲೀಸರು ದಾಳಿ ನಡೆಸಿ, ಯುವತಿಯನ್ನು ರಕ್ಷಿಸಿದ್ದಾರೆ. ರಕ್ಷಿಸಿದ ಯುವತಿಯು ಶಿವಮೊಗ್ಗ ಮೂಲದವಳಾಗಿದ್ದು, ಆಕೆಯನ್ನು ಕೇಶವ ಎಂಬಾತ ಕೆಲಸಕ್ಕೆಂದು ಕರೆಸಿಕೊಂಡು ಬಲವಂತವಾಗಿ ವೇಶ್ಯಾವಾಟಿಕೆ ಚಟುವಟಿಕೆಗೆ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಜಗನ್ನಾಥ್ ಎಂಬಾತ ರೂಮು ಒದಗಿಸಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ