72
ಶಿವಮೊಗ್ಗ : ಗಣೇಶ ಮೂರ್ತಿ ಮತ್ತು ನಾಗರ ಕಲ್ಲಿನ ವಿಗ್ರಹವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಮಿಧುನ್ ಕುಮಾರ್ ತಿಳಿಸಿದ್ದಾರೆ
ಬಂಧಿತರ ವಿವರ ನೀಡುವುದಕ್ಕೆ ನಿರಾಕರಿಸಿರುವ ಅವರು, ಬಂಗಾರಪ್ಪ ಬಡಾವಣೆಯ ಉದ್ಯಾನದಲ್ಲಿದ್ದ ನಾಗರಮೂರ್ತಿ ಕಿತ್ತು ಹಾಕಿ ಗಣೇಶನ ಮೂರ್ತಿ ಧ್ವಂಸಗೊಳಿಸಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಹಾಗೂ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ

